ಖ್ಯಾತ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ ಅವರ ತೆಲುಗು ಕಾದಂಬರಿಯನ್ನು ಲೇಖಕ ವಂಶಿ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ದುಡ್ಡು ದುಡ್ಡು. ಇಂತಹ ಹಪಾಹಪಿಗೆ ಬೀಳುವ ಮನುಷ್ಯನ ಸ್ಥಿತಿಯು ಹೀನಾಯವಾಗಿರುತ್ತದೆ. ಮನುಷ್ಯತ್ವವೇ ಬದುಕಿಗೆ ಅರ್ಥ ತಂದುಕೊಡುತ್ತದೆ ಎಂಬ ಸಂದೇಶದ ಕಾದಂಬರಿ ಇದು. ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಕಲಾತ್ಮಕ ಜೋಡಣೆ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ಸ್ವತಃ ಪ್ರಕಾಶಕರಾದ ವಂಶಿ ಅವರು ಯಂಡಮೂರಿ ವೀರೇಂದ್ರನಾಥ ಅವರ ಆನಂದೋಬ್ರಹ್ಮ, ಬೆಳದಿಂಗಳ ಬಾಲೆ, ತುಳಸಿ, ಪ್ರಾರ್ಥನೆ, ತುಳಸಿ ದಳ ಇತ್ಯಾದಿ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE