ನೊಬೆಲ್ ಪುರಸ್ಕಾರ (1881)ಪಡೆದ ಸ್ಪ್ಯಾನಿಷ್ ಭಾಷೆಯ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವಿಸ್ ಅವರ ಲೇಖನಗಳನ್ನು ಬಿದರಹಳ್ಳಿ ನರಸಿಂಹಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೀಸ್ ಲ್ಯಾಟಿನ್ ಅಮೆರಿಕಾದ ಕೊಲಂಬಿಯಾ ದೇಶದವನು. ಸ್ಪ್ಯಾನಿಷ್ ಭಾಷೆಯಲ್ಲಿ ಬರೆಯುವ ಈತನ ಒನ್ ಹಂಡ್ರಡ್ ಇಯರ್ಸ್ ಆಫ್ ಸಾಲಿಟ್ಯೂಡ್ ಕಾದಂಬರಿ ಪುರಾಣ ವರ್ತಮಾನಗಳನ್ನು ಒಟ್ಟೊಟ್ಟಿಗೆ ಬೆಸೆಯುವ ವಿನೂತನ ಶೈಲಿಯಲ್ಲಿ ಜಗದ್ವಿಖ್ಯಾತಿ ಪಡೆದಿದೆ. ಮಾಂತ್ರಿಕ ವಾಸ್ತವತೆಯನ್ನು ಸೃಷ್ಟಿಸುವಲ್ಲಿ ತನ್ನ ಪ್ರತಿಭಾ ಶಕ್ತಿಯನ್ನು ಸೂರೆಗೊಂಡಿರುವ ಮಾರ್ಕ್ವಿಸ್ ಪತ್ರಕರ್ತನಾಗಿಯೂ ಕೆಲಕಾಲ ಕೆಲಸ ಮಾಡಿದ್ದಾನೆ. ಆಧುನಿಕ ಸಾಹಿತ್ಯದ ಎಲ್ಲೆಯನ್ನು ವಿಸ್ತರಿಸಿದ ಅಪರೂಪದ ಲೇಖಕ ಮಾರ್ಕ್ವಿಸ್, ಜನಪ್ರಿಯತೆಗಳಿಸುವಂತ ಗಂಭೀರ ಸಾಹಿತ್ಯದ ನಿರ್ಮಾಣವೂ ಸಾಧ್ಯ ಎಂಬುದನ್ನು ಮಾರ್ಕ್ವಿಸ್ ಕೃತಿಗಳು ತೋರಿಸಿಕೊಟ್ಟಿವೆ. ಕನ್ನಡ ಓದುಗರಿಗೆ ಈಗಾಗಲೇ ಕುತೂಹಲ ಹುಟ್ಟಿಸಿರುವ ಮಾರ್ಕ್ವಿಸ್ ಸಾಹಿತ್ಯವನ್ನು ಈ ಕೃತಿಯಲ್ಲಿ ಪರಿಚಯಿಸಲು ಯತ್ನಿಸಿದ್ದಾರೆ ಲೇಖಕ ಬಿದರಹಳ್ಳಿ ನರಸಿಂಹಮೂರ್ತಿ.
©2024 Book Brahma Private Limited.