ಎರಡು ಕಾದಂಬರಿಗಳನ್ನು ಒಳಗೊಂಡ ಪುಸ್ತಕ. ಕಬ್ಬಿನ ಬನದಲ್ಲಿ ಕಾದಂಬರಿಯೊಂದಿಗೆ ’ಪ್ರೀತಿಸಿದವನು ನೀನೊಬ್ಬನೇ ಅಲ್ಲ’ ಎಂಬ ಇನ್ನೊಂದು ಕಾದಂಬರಿ ಸೇರಿಸಲಾಗಿದೆ. ಈರಪ್ಪ ಕಂಬಳಿ ಮುನ್ನುಡಿ ಬರೆದಿದ್ದಾರೆ. ಇದು ಅತ್ತಿಮಬ್ಬೆ ಪ್ರಶಸ್ತಿಗೆ ಪಾತ್ರವಾಗಿತ್ತು. 'ಕಬ್ಬಿನ ಬನದಲ್ಲಿ' ಕಾದಂಬರಿ ರಾಗಸಂಗಮ ಪತ್ರಿಕೆಯಲ್ಲಿ ಪೂರ್ಣ ಕಾದಂಬರಿಯಾಗಿ ಪ್ರಕಟಗೊಂಡಿತ್ತು. 'ಪ್ರೀತಿಸಿದವನು ನೀನೊಬ್ಬನೇ ಅಲ್ಲ ' ಕಾದಂಬರಿ ’ಬೆಳಕಿಂಡಿ’ ಪತ್ರಿಕೆಯಲ್ಲಿ ಧಾರಾವಾಹಿಯಾಗಿತ್ತು. ಕಬ್ಬಿನ ಬನದಲ್ಲಿ ಹಳ್ಳಿಯ ಗೌಡನ ದೌರ್ಜನ್ಯದ ಚಿತ್ರಣವಿದೆ. ಪ್ರೀತಿಸಿದವನು… ಕಾದಂಬರಿಯಲ್ಲಿ ಲೇಖಕನೊಬ್ಬನ ಕಥೆ ಬರೆಯುವ ತಂತ್ರ ವಿವರಣೆ ಹೊಂದಿದೆ. ತಾನೇ ಸಂದರ್ಶಿಸಿ ಸಿದ್ಧಪಡಿಸುವ ಕಾದಂಬರಿಗೆ ತಾನೇ ಸಿಕ್ಕಿಕೊಂಡು ಪಾತ್ರವಾಗುವ ತಂತ್ರ ವಿನ್ಯಾಸ ಗಮನಿಸ ಬಹುದಾಗಿದೆ.
’ಕ್ಷಿತಿಜ್ ಬೀದರ್’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುವ ಬಸವರಾಜ ಮಠಪತಿ ಅವರು ಜನಿಸಿದ್ದು 1954ರ ಜೂನ್ 1 ರಂದು. ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಬನ್ನಳ್ಳಿ ಎಂಬ ಗ್ರಾಮದಲ್ಲಿ. ತಂದೆ ನಾಗಯ್ಯ ಸ್ವಾಮಿ ಮಠಪತಿ, ತಾಯಿ ಶಾರದಾ ದೇವಿ. ಬಸವರಾಜ ಅವರ ಕುಟುಂಬವು 1957 ರಲ್ಲಿ ನಿರ್ಣಾ ಗ್ರಾಮಕ್ಕೆ ವಲಸೆ ಬಂದು ನೆಲೆಸಿತು. ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ನಿರ್ಣಾ ಗ್ರಾಮದಲ್ಲಿ ಮುಗಿಸಿ ಬಸವರಾಜ ಅವರು ಬಿ. ಎಸ್ಸಿ. ಪದವಿ (1974) ಯನ್ನು ಬೀದರನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ ಪಿ.ಜಿ.ಡಿ.ಎಸ್. (1979), ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ. ...
READ MORE