’ದಾಹ’ - ತಮಿಳಿನ ಖ್ಯಾಸ ಸಾಹಿತಿ ಕೆ.ಚಿನ್ನಪ್ಪ ಅವರ ಕಾದಂಬರಿಯನ್ನು ಟಿ.ಡಿ.ರಾಜಣ್ಣ ತಗ್ಗಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಮನುಷ್ಯನ ಒಳಗೆ ತುಡಿಯುವ ತೀರದ ತುಡಿತ. ದಾಹಕ್ಕೆ ಕೊನೆಯಿಲ್ಲ. ಅದು ತಣಿಯುವುದೂ ಇಲ್ಲ. ಸಮಾಜದ ಪ್ರತಿಯೊಬ್ಬರೂ ಒಂದಲ್ಲ ಒಂದು ದಾಹದಿಂದ ಬಳಲುವವರೇ. ಅದರ ಬಳಳಿಕೆ ಮಾತ್ರ ಭಿನ್ನ ಬಗೆಯದ್ದು, ಇಂಥ ಬಳಳಿಕೆಯನ್ನು ಇತಿಹಾಸ ಪದ್ದತಿಯಲ್ಲಿಟ್ಟು ಸಾಹಿತ್ಯ ರಸಾನುಭೂತಿಯೊಂದಿಗೆ ರಚಿಸಲ್ಪಟ್ಟ ಕಾದಂಬರಿಯೇ ದಾಹ.
ಇದು ರೈತರ ಮತ್ತು ದಲಿತರ ಬದುಕಿನ ಬವಣೆ, ಬಡತನ, ಶೋಷಣೆ, ಸಂಕಟ, ಅಸಹಾಯಕತೆ, ನೋವು ವೇದನೆ ಹೀಗೆ ಅನೇಕ ಶೋಚನೀಯ ಜೀವನಾನುಭವಗಳನ್ನು ಹಿಡಿಹಿಡಿಯಾಗಿ ಮೊಗೆದಿಟ್ಟು, ಓದುಗನ ಮನ ಕರಗುವಂತೆ ಕರುಣಾಜನಕವಾಗಿ, ಸೂಕ್ಷ್ಮವಾಗಿ ವಿವರಿಸಿಕೊಂಡು ಹೋಗುವ ದುರಂತ ಕತೆ. ಕಲಾತ್ಮಕ ಮೌಲ್ಯದ ಈ ಕಾದಂಬರಿ ತಮಿಳು ಕಾದಂಬರಿ ಚರಿತ್ರೆಯಲ್ಲಿ ಒಂದು ಅಪರೂಪದ ಹೆಜ್ಜೆಯಗಿದೆ., ಮತ್ತು ಅಷ್ಟೇ ಸೂಕ್ಷ್ಮತೆಯಲ್ಲಿ ಟಿ.ಡಿ.ರಾಜಣ್ಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ
ಕನ್ನಡದ ಯುವ ಸಂಶೋಧಕ, ಅನುವಾದಕ ಟಿ.ಡಿ. ರಾಜಣ್ಣ ತಗ್ಗಿ ಅವರು ಮೂಲತಃ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ತಗ್ಗಿಹಳ್ಳಿಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ, ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಗಳನ್ನು ಪಡೆದಿರುವ ಅವರು ಮದರಾಸು ವಿಶ್ವವಿದ್ಯಾಲಯ ಹಾಗೂ ಜೈನ್ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮೌಲಿಕ ಪ್ರಬಂಧಗಳನ್ನು ಮಂಡಿಸಿರುವ ರಾಜಣ್ಣ ತಗ್ಗಿ ಅವರು ಮದರಾಸು , ಬೆಂಗಳೂರು ಮತ್ತು ಗುಲಬರ್ಗಾ ಆಕಾಶವಾಣಿ ಕೇಂದ್ರಗಳಲ್ಲಿಯೂ ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಭಾಷೆ ಬಲ್ಲವರಾಗಿದ್ದು, ...
READ MORE