‘ಜೀವ ಕೊಡಲೇ? ಚಹ ಕುಡಿಯಲೇ?’ ದಾಮೋದರ ಮಾವಜೊ ಅವರ ಕೊಂಕಣಿ ಕಾದಂಬರಿಯ ಕನ್ನಡಾನುವಾದ. ಲೇಖಕ, ಅನುವಾದಕ ಕಿಶೂ ಬಾರ್ಕೂರು ಕನ್ನಡಕ್ಕೆ ಅನುವಾದಿಸಿದ್ದಾರೆ. ಗೋವಾದ ಬಹುಸಂಸ್ಕೃತಿ ಮಿಶ್ರಣದ ಜೀವನದ ವಿಶಿಷ್ಟ ಒಳನೋಟಗಳನ್ನು ಕೊಡುವ, ಕೊಂಕಣಿಯ ಬಹುಮುಖ್ಯ ಲೇಖಕರಲ್ಲೊಬ್ಬರಾದ ದಾಮೋದರ ಮಾವಜೋ ಅವರ ಹೊಸ ಕಾದಂಬರಿಯ ಕನ್ನಡಾನುವಾದವಿದು. ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳಿಂದ ಪುರಸ್ಕೃತರಾದ ಮಾವಜೋ ಈ ಕೃತಿಯಲ್ಲಿ ಹದಿಹರೆಯದವರ ಕಣ್ಣಿನಿಂದ ಜೀವನದ ಹೊಯ್ದಾಟಗಳನ್ನು ಕಂಡಿದ್ದಾರೆ.
ಕಿಶೂ ಬಾರ್ಕೂರು ಕಾವ್ಯನಾಮದಿಂದ ಬರೆಯುವ ಕಿಶೋರ್ ಕುಮಾರ್ ಪೀಟರ್ ಗೊನ್ಸಾಲ್ವಿಸ್ ಕೊಂಕಣಿಯ ಕವಿ ಹಾಗೂ ಲೇಖಕ. ಕೊಂಕಣಿ ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಕವಿತೆ, ಸಣ್ಣ ಕಥೆ ಹಾಗೂ ವೈಜ್ಞಾನಿಕ ವಿಷಯಗಳ ಮೇಲೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಸಂಗೀತ, ನಾಟಕ ಹಾಗೂ ಸಿನೇಮಾ ಇವರ ಅಭಿರುಚಿಯ ಕ್ಷೇತ್ರಗಳು. ಗಾಯಕರಾಗಿಯೂ ಪ್ರಸಿದ್ಧರಾಗಿರುವ ಇವರ ಪ್ರಕಟಿತ ಸಾಹಿತ್ಯ ಕೃತಿಗಳು ‘ಧಾಕ್ಟ್ಯಾ ದೆವಾಚಿಂ ಭುರ್ಗಿಂ’ (ಕವಿತಾ ಸಂಗ್ರಹ) ಮತ್ತು ‘ರುಪ್ಣಿಂ’ (ಕಥಾಸಂಕಲನ). ‘ರುಪ್ಣಿಂ’ ಪುಸ್ತಕಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ. ಕವಿತಾ ಟ್ರಸ್ಟಿನ ಮಾಜಿ ಕಾರ್ಯದರ್ಶಿಯಾದ ಕಿಶೂ ಬಾರ್ಕೂರು ಪ್ರಸ್ತುತ ...
READ MORE