ನೆಲ,ಸ್ವಂತ ಮನೆಯ ಕನಸು ನಾಲ್ಕು ಜನ ಕೂಡಿದ ಕಡೆಯಲ್ಲೆಲ್ಲ ಪ್ರಸ್ತಾಪವಾಗಿ ಬಿಡುವ ವಿಚಾರ.ಮಧ್ಯಮ ದರ್ಜೆಯ ಜನರಲ್ಲಿ ಇದೊಂದು ಅದ್ಭುತವಾದ ಕನಸು.ಅನುಭವ ವಿಸ್ತಾರಗೊಂಡು ವಿಚಾರ ವಿನಿಮಯಗಳು ಅತ್ಯಂತ ಭರಾಟೆಯಿಂದ ನಡೆಯುತ್ತಿತ್ತು. ಇಲ್ಲಿ ಸೋಲು-ಗೆಲುವುಗಳ ಮಿಶ್ರಣಗಳ ಜೊತೆ ಅಚ್ಚರಿಯ ಕೂಡ ಬುದ್ಧಿವಂತಿಕೆಯ ಪ್ರದರ್ಶನವಿರುತ್ತಿತ್ತು.ಒಮ್ಮೆ ಈ ವಸ್ತುವನ್ನು ಇಟ್ಟುಕೊಂಡು ಪುಟ್ಟ ಕವನ ಬರೆದರೆ ಹೇಗೆಂದು ಯೋಚಿಸಿ ಲೇಖನಿ ಹಿಡಿದಾಗ, ಅದು ಮೊದಲು ಆಗಿದ್ದು ಕತೆ ನಂತರ ಕಾದಂಬರಿಯಾಗಿ ರೂಪುಗೊಂಡಿದ್ದೇ ‘ರಜತನಂದನ’ಅನ್ನೋದು ಕಾದಂಬರಿಕಾರ್ತಿಯ ಮಾತು.
©2024 Book Brahma Private Limited.