ಪ್ರತೀ ಪುಟದಲ್ಲೂ ರೋಚಕತೆ, ಬದುಕಿನ ತವಕ-ತಲ್ಲಣಗಳು, ಸಾಮಾಜಿಕ ಸಮಸ್ಯೆಗಳ ನಿಖರ ವಿಶ್ಲೇಷಣೆಯನ್ನು ಒಳಗೊಂಡ ಕೃತಿ-ಅಂತಿಮ ಹೋರಾಟ. ಕರ್ತೃ ಯಂಡಮೂರಿ ವೀರೇಂದ್ರನಾಥ. ಈ ಕಾದಂಬರಿಯನ್ನು ಲೇಖಕ ರಾಜಾ ಚೆಂಡೂರು ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಟೆರರಿಸಂ - ಪ್ರಜಾಪ್ರಭುತ್ವ ಹಾಗೂ ಅಹಿಂಸೆಯ ಪಾಠ ಹೇಳುತ್ತದೆ ಎಂಬ ಅಂಶಗಳು ಕಾದಂಬರಿಯ ಓದಿಗೆ ವೇಗ ನೀಡುತ್ತದೆ.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE