ಕೊನೆಯ ಅಲೆ

Author : ಸುಮಂಗಲಾ ಎಸ್. ಮುಮ್ಮಿಗಟ್ಟಿ

Pages 260

₹ 250.00

Buy Now


Year of Publication: 2018
Published by: ನವಕರ್ನಾಟಕ ಪ್ರಕಾಶನ
Address: ಎಂಬಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು.

Synopsys

ದಕ್ಷಿಣ ಮತ್ತು ಮಧ್ಯಅಂಡಮಾನಿನ ತೆಳುವಾದ ದಟ್ಟ ಕಾಡುಗಳಲ್ಲಿ ಪುರಾತನವಾದ ಮತ್ತು ಅಪಾಯದಲ್ಲಿರುವ ಜರವಾ ಸಮುದಾಯದೊಂದಿಗೆ ಆಕಸ್ಮಿಕವಾಗಿ ಭೇಟಿಯಾಗುತ್ತಾರೆ. ಹೊರ ಜಗತ್ತಿಗೆ ತಿಳಿಯದ ಯಾರು ಪ್ರವೇಶಿಸದ ಈ ಕಾಡು ಜರವಾಗಳು ಎಂಬ ಕಾಡುಜನಾಂಗದ ಮನೆಯಾಗಿತ್ತು.ಜರವಾ ಜನಾಂಗದ ಬಗೆಗೆ ಇದ್ದ ಹರೀಶನ ಕಳಕಳಿ, ದ್ವೀಪಗಳ ಬಗ್ಗೆ ಅವನಿಗಿದ್ದ ಪ್ರೀತಿಯನ್ನು ವಿವರಿಸಲಾಗಿದೆ.ದೈತ್ಯ ಸುನಾಮಿಗೆ ಒಂದು ಜನಾಂಗ ಮತ್ತು ಸಂಸ್ಕೃತಿ ಇತಿಹಾಸವು ನಾಮವಶೇಷವಾದ ಘಟನೆಯನ್ನು ಈ ಕೃತಿಯು ಒಳಗೊಂಡಿದೆ.

About the Author

ಸುಮಂಗಲಾ ಎಸ್. ಮುಮ್ಮಿಗಟ್ಟಿ
(04 November 1964)

ವಿಜ್ಞಾನ ಸಂವಹನಕ್ಕಾಗಿ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿ ಪುರಸ್ಕೃತರಾದ ಸುಮಂಗಲಾ ಅವರು ಈ ಪರಿಸರ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಲ್ಲದೇ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಆಕಾಡಮಿಯಿಂದ ಶ್ರೇಷ್ಠ ವಿಜ್ಞಾನ ಲೇಖಕಿ ಪ್ರಶಸ್ತಿ ಪಡೆದಿದ್ದಾರೆ. ಜೈವಿಕ ವೈವಿಧ್ಯದ ಅತ್ಯುತ್ತಮ ಸಂವಹನಕ್ಕಾಗಿ ಲಂಡನ್ನಿನ ಎನ್ವಿರಾನ್ಮೆಂಟ್ ಎಜುಕೇಶನ್ ಸಂಸ್ಥೆಯ ಮನ್ನಣೆ ಪಡೆದಿದ್ದಾರೆ. ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿರುವ ಇವರು ವಿಜ್ಞಾನ ಕಾರ್ಯಕ್ರಮಗಳಿಗಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದವರು. ಇವರ ಹಲವು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ. ನವಕರ್ನಾಟಕದ ವಿಜ್ಞಾನ ಸರಳ ಪರಿಚಯ ಮಾಲಿಕೆಯ ಸಂಪಾದಕರಲ್ಲಿ ಒಬ್ಬರು. ಇವರ ಹಲವಾರು ಪುಸ್ತಕ- ಲೇಖನ ...

READ MORE

Related Books