18-19ನೇ ಶತಮಾನದಲ್ಲಿ ಭಾರತದ ಸ್ಥಿತಿ-ಗತಿಗಳ ಕುರಿತು ಮೆಡೋಸ್ ಟೇಲರ್ ನ ’ ಕನ್ಫೆಷನ್ಸ್ ಆಪ್ ಎ ಥಗ್’ ಕೃತಿಯ ಕನ್ನಡಾನುವಾದವನ್ನು ಲೇಖಕ ಎನ್.ಪಿ. ಶಂಕರ ನಾರಾಯಣ ರಾವ್ ಮಾಡಿದ್ದು, 1997-98ರಲ್ಲಿ ಕರ್ಮವೀರ ವಾರಪತ್ರಿಕೆಯಲ್ಲಿ ’ಠಕ್ಕನೊಬ್ಬನ ಆತ್ಮಚರಿತ್ರೆ’ ಶೀರ್ಷಿಕೆಯಡಿ ಪ್ರಕಟಗೊಂಡಿತ್ತು.
1707ರಲ್ಲಿ ಮೊಗಲ್ ಸಾಮ್ರಾಟರ ಪೈಕಿ ಕೊನೆಯವನಾದ ಔರಂಗಜೇಬ ನಿಧನರಾದ ನಂತರ ಸುಮಾರು 150 ವರ್ಷಗಳ ಕಾಲ ಭಾರತದಲ್ಲಿ ರಾಜಕೀಯ ಮೇಲುಗೈ ಸಾಧಿಸಲು ಅಸಂಖ್ಯ ಏರಿಳಿತಗಳು ನಡೆದವು. ಈ ಕಾದಂಬರಿಯಲ್ಲಿ ಚಿತ್ರಿತವಾದ ಠಕ್ಕವೃತ್ತಿಯು 13ನೇ ಶತಮಾನದಿಂದಲೂ ಇತ್ತಾದರೂ 19ನೇ ಶತಮಾನದಲ್ಲಿ ಪ್ರಬಲವಾಯಿತು ಎಂಬುದನ್ನು ಚಿತ್ರಿಸುತ್ತದೆ. ಠಕ್ಕ ವೃತ್ತಿ ಕೊನೆಗಾಣಿಸಲು, ಡಕಾಯಿತರನ್ನು ಅಡಗಿಸಲು, ಬ್ರಿಟಿಷ್ ಸರ್ಕಾರ 1836ರಲ್ಲಿ ಇಲಾಖೆಯನ್ನು ಸ್ಥಾಪಿಸಿ, ಡಬ್ಲ್ಯು.ಎಚ್.ಸ್ಲೀಮನ್ ಅವರನ್ನು ಮುಖ್ಯಸ್ಥರನ್ನಾಗಿಸಿತ್ತು. ಇದರ ಪರಿಣಾಮ 1850ರ ಸುಮಾರಿಗೆ ಠಕ್ಕ ವೃತ್ತಿ ಹೆಚ್ಚು ಕಡಿಮೆ ನಿರ್ನಾಮವಾಯಿತು. ಪಿಂಡಾರಿ ಯುದ್ಧ (ಮರಾಠ ಯುದ್ಧ) ಈ ಕಾದಂಬರಿಯಲ್ಲಿ ವರ್ಣಿತವಾಗಿದೆ.
©2024 Book Brahma Private Limited.