ಸುಪ್ತ ಸ್ವರ

Author : ವಿವೇಕಾನಂದ ಕಾಮತ್

Pages 224

₹ 150.00




Year of Publication: 2012
Published by: ಪಾಂಚಜನ್ಯ ಪಬ್ಲಿಕೇಷನ್ಸ್
Address: ನಂ. 56 / 1-6 , ನರಸಿಂಹಯ್ಯ ಗಾರ್ಡನ್ , ಕೊಟ್ಟಿಗೆಪಾಳ್ಯ, ಮಾಗಡಿ ಮುಖ್ಯರಸ್ತೆ , ಬೆಂಗಳೂರು - 560091

Synopsys

ಆರ್ಥಿಕ ಸ್ವಾವಲಂಬನೆಯೇ ಹೆಣ್ಣಿಗೆ ಮುಖ್ಯ, ಅದೇ ಅವಳ ವ್ಯಕ್ತಿತ್ವಕ್ಕೆ ಶೋಭೆ ಎಂದು ಅವಿವಾಹಿತಳಾಗಿ ಉಳಿದ ಅಕ್ಕ, ಸಂಸಾರ ಬಂಧನದಲ್ಲಿ ಸುಖವಾಗಿ ತೇಲಾಡಿಕೊಂಡಿದ್ದ ತಂಗಿ.. ಒಂದು ಹಂತದಲ್ಲಿ, ಅಕ್ಕನಿಗೆ ತಂಗಿಯ, ತಂಗಿಗೆ ಅಕ್ಕನ ಜೀವನವೇ ನಿಜವಾದ ಸಾಧನೆಯೆನಿಸುತ್ತದೆ. ತನಗಿಂತ ವಯಸ್ಸಿನಲ್ಲಿ ಚಿಕ್ಕವನನ್ನು ಮದುವೆಯಾಗುವ ಅಕ್ಕ, ತನಗೊಂದು ವ್ಯಕ್ತಿತ್ವ ದೊರಕಿಸಿಕೊಳ್ಳಲು ಬರಹಗಾರ್ತಿಯಾಗುವ ತಂಗಿಯ ಹುಡುಕಿಕೊಂಡ ಅವರ ಜೀವನದ ಸುಪ್ತಸ್ವರಗಳು ಇಲ್ಲಿ ದಾಖಲಾಗಿವೆ. ತರಂಗ ಸಪ್ತಾಹಿಕ ಈ ಕಾದಂಬರಿಯನ್ನು ಪ್ರಕಟಿಸಿದೆ.

About the Author

ವಿವೇಕಾನಂದ ಕಾಮತ್
(21 January 1976)

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...

READ MORE

Related Books