'ಸೇತು' ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕಾದಂಬರಿಯಾಗಿದೆ. ನೂರಿಪ್ಪತ್ತು ವರ್ಷಗಳ ಚರಿತ್ರೆಯನ್ನು ಹೊಂದಿದ ಮರಾಠಿ ಕಥನ ಪರಂಪರೆಯಲ್ಲಿ ಲೇಖಕಿಯರ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗಿದೆ. ಬರೇ ಸಂಖ್ಯಾತ್ಮಕವಲ್ಲ, ಗುಣಾತ್ಮಕ ಬೆಳವಣಿಗೆಯನ್ನೂ ಗುರುತಿಸಬಹುದಾಗಿದೆ. ಆಧುನಿಕವಾದ ಲೇಖಕ ಲೇಖಕಿಯರ ಟಿಪಿಕಲ್ ಮಾದರಿಯ ಕೃತಿಗಳನ್ನು ಹುಡುಕುವ ನನ್ನ ಕಣ್ಣಿಗೆ ಆಶಾ ಬಗೆಯವರ ಕಥೆ ಕಾದಂಬರಿಗಳು ಕಾಣಿಸಿದವು. ಮಹಾರಾಷ್ಟ್ರ ಹಾಗೂ ಎರಡೂ ಸಂಸ್ಕೃತಿಗಳ ಸಂಘರ್ಷವನ್ನು ಈ ಕಾದಂಬರಿಯಲ್ಲಿ ಆರೋಗ್ಯಕರವಾದ ನೆಲೆಯಲ್ಲಿ ಚಿತ್ರಿಸಲಾಗಿದೆ. ಪಾತ್ರಗಳಿಗೆ ಏಕಕಾಲಕ್ಕೆ ವ್ಯಕ್ತಿತ್ವ ಹಾಗೂ ಚೈತನ್ಯದ ರೂಪವನ್ನು ನೀಡುವುದು ಆಶಾ ಬಗೆಯವರ ಕಥಾ ಸೃಷ್ಟಿಯ ವೈಶಿಷ್ಟ್ಯ . ಕಾರಂತರ ಕಾದಂಬರಿಗಳಂತೆ ಜೀವನ ಶ್ರದ್ಧೆಯನ್ನು ಬಲಿಷ್ಠಗೊಳಿಸುವ ಹಾಗೂ ಅದರ ಸೌಂದರ್ಯದ ದರ್ಶನವನ್ನು ಮಾಡಿಸುವ ಆಶಾ ಬಗೆಯವರು ಕಾದಂಬರಿಗಾರ್ತಿಯಾಗಿ ಮರಾಠಿಯ ಕಥಾಪ್ರಪಂಚದಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದಿದ್ದಾರೆ. ತಮ್ಮ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಇವರು ಮರಾಠಿ ಓದುಗರ, ಸಹೃದಯರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಮದು ಅನುವಾದಕ ಚಂದ್ರಕಾಂತ ಪೋಕಳೆ ಅವರು ಪುಸ್ತಕದ ಬೆನ್ನುಡಿಯಲ್ಲಿ ಹೇಳಿದ್ದಾರೆ.
ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...
READ MORE