ಶರಶ್ಚಂದ್ರ ಚಟ್ಟೋಪಾಧ್ಯಯ ಅವರ `ಅನುಪಮ ಕಾ ಪ್ರೇಮ್' ಹಿಂದಿ ಕಾದಂಬರಿಯ ಕನ್ನಡಾನುವಾದ ಪ್ರೇಮಯೋಗಿನಿ. ಈ ಕಾದಂಬರಿಯನ್ನು ಸಿ.ಕೆ. ನಾಗರಾಜ ರಾವ್ ಅನುವಾದಿಸಿದ್ದಾರೆ. ಜೀವನದಲ್ಲಿ ಪ್ರೇಮವೇ ಸರ್ವಸ್ವ ಎಂದು ತಿಳಿದ ನಾಯಕಿಯ ದುರಂತ ಕಥೆ ಇದು. ಆತ್ಮಹತ್ಯೆಗೂ ಯತ್ನಿಸಿದ್ದಾಕೆಯನ್ನು ಬದುಕಿಸಿ, ಜೀವನವನ್ನು ಪ್ರೀತಿಸಬೇಕು ಎಂಬ ಸಂದೇಶದೊಂದಿಗೆ ಕಾದಂಬರಿ ಮುಕ್ತಾಯಗೊಳ್ಳುತ್ತದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಸಿ. ಕೆ. ನಾಗರಾಜರಾವ್ ಅವರು 1915ರ ಜೂನ್ 12ರಂದು ಜನಿಸಿದರು. ತಂದೆ ಕೃಷ್ಣಮೂರ್ತಿ ರಾವ್ ಮತ್ತು ತಾಯಿ ಪುಟ್ಟಮ್ಮ..ತಂದೆ ವಿವಿಧೆಡೆ ವರ್ಗವಾಗುತ್ತಿರುವ ಪ್ರಯುಕ್ತ ಇವರ ಪ್ರಾಥಮಿಕ ಶಿಕ್ಷಣವು ವಿವಿಧಡೆಯಾಯಿತು. ಎಸ್.ಎಸ್.ಎಲ್.ಸಿ ಉತ್ತೀರ್ಣವಾಗಿದ್ದು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ. ಇಂಟರ್ಮೀಡಿಯೆಟ್‌ನಲ್ಲಿ ಉತ್ತೀರ್ಣರಾದರೂ ಓದು ಮುಂದುವರಿಯದೇ ಮೈಸೂರು ಪ್ರೀಮಿಯರ್ ಮೆಟಲ್ ಕಾರ್ಖಾನೆಯಲ್ಲಿ. ಸಿಬ್ಬಂದಿ ನಿಯಂತ್ರಣ ವಿಭಾಗದಲ್ಲಿ ಉದ್ಯೋಗಕ್ಕೆ ಸೇರಿದರು.ನಂತರ ಅದನ್ನು ತೊರೆದು, ನಿಟ್ಟೂರು ಶ್ರೀನಿವಾಸರಾಯರು ನಡೆಸುತ್ತಿದ್ದ ಸತ್ಯಶೋಧನ ಪ್ರಕಟಣಾ ಮಂದಿರದಲ್ಲಿ ವ್ಯವಸ್ಥಾಪಕರಾದರು. ಇಂಡಿಯನ್ ಮ್ಯೂಚುಯಲ್ ಲೈಫ್ ಅಸೋಸಿಯೇಷನ್ ಸಂಸ್ಥೆಗೂ ಸೇರಿದರು. ನಂತರ ಪತ್ರಿಕೋದ್ಯಮ ಸೇರಿದರು. ಕನ್ನಡ ಮತ್ತು ...
READ MORE