ಪೆರುಮಾಳ್ ಮುರುಗನ್ ಅವರು ತಮಿಳು ಭಾಷೆಯಲ್ಲಿ ಬರೆದ ಕಾದಂಬರಿಯನ್ನು ಲೇಖಕ ಕೆ.ನಲ್ಲತಂಬಿ ಅವರು ಅರ್ಧನಾರೀಶ್ವರ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ತುಂಬಾ ವಿವಾದ ಸೃಷ್ಟಿಸಿದ ಕಾದಂಬರಿ ಇದು. ಕಾಳಿ-ಪೊನ್ನ ಎಂಬ ದಂಪತಿಗೆ ಮಕ್ಕಳಾಗಲಿಲ್ಲ ಎಂಬುದು ಹಾಗೂ ಅದೇ ಬಹುದೊಡ್ಡ ವಿಷಯವಾಗಿ ಕಾದಂಬರಿಯೊಂದನ್ನು ನಡೆಸಿಕೊಂಡು ಹೋಗುವ ರಭಸ ಈ ಕೃತಿಯ ಗಟ್ಟಿತನವಾಗಿದೆ.
ನಿಯೋಗ ಪದ್ಧತಿ ಎಂಬುದು ಪುರಾಣದ ಕಥೆಗಳಲ್ಲಿ ಹೊಸದಲ್ಲ. ಆದರೆ, ಈ ಪದ್ಧತಿಯನ್ನು ಸಾಮಾಜಿಕವಾಗಿ ಬಹಿರಂಗ ಒಪ್ಪಿಗೆಗೆ ವಿರೋಧವೇ ಇದೆ. ಪತಿಯಿಂದ ಮಕ್ಕಳಾಗದಿದ್ದರೆ ಆ ಹೆಣ್ಣು ತನಗಿಷ್ಟವಾದ ಗಂಡಿನೊಂದಿಗೆ ಕೂಡಬಹುದು ಎಂಬುದು ನಿಯೋಗ ಪದ್ಧತಿಯ ಮೂಲ ಅಂಶ. ಪ್ರಸ್ತುತ ಸಂದರ್ಭದಲ್ಲಿ, ಈ ನಿಯೋಗ ಪದ್ಧತಿಯ ನಿಯಮಗಳು ಜಾತಿ, ಲಿಂಗ, ಪಿತೃಪ್ರಧಾನ ವ್ಯವಸ್ಥೆ ಇತ್ಯಾದಿ ಹಿನ್ನೆಲೆಯಲ್ಲಿ ಹೇಗೆ ತೊಡಕಾಗುತ್ತವೆ ಎಂಬುದೂ ಈ ಕಾದಂಬರಿಯ ಗಮನಾರ್ಹ ಅಂಶ. .ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಈ ಕಾದಂಬರಿ ಹುಟ್ಟು ಹಾಕುತ್ತಿದೆ.
©2024 Book Brahma Private Limited.