`ಕರಿಮೆಣಸಿನ ಗಿಡ’ ಕೃತಿಯು ವಿ. ಚಂದ್ರಶೇಖರ್ ರಾವ್ ಅವರ ಮೂಲ ಕೃತಿಯಾಗಿದ್ದು, ಕನ್ನಡಕ್ಕೆ ಸೃಜನ್ ಅವರು ಅನುವಾದಿಸಿದ್ದಾರೆ. ಕುಸುರಿ ಕಲೆಯಂತೆ ಅರಳುತ್ತ ನಿಂತಿರುವ ಈ ಕಾದಂಬರಿಯು, ನಿಧಾನವಾಗಿ ವಸ್ತುವಿನುದ್ದಕ್ಕೂ ಜೀವಂತವಾಗಿ ವ್ಯಾಪಿಸುತ್ತ, ದಲಿತ ಜನಾಂಗವೊಂದು (ಮಾದಿಗ) ಪ್ರಸ್ತುತ ಸಂದರ್ಭದಲ್ಲಿ ಎದುರಿಸುತ್ತಿರುವ ಹೊಸ ಸಮಸ್ಯೆ-ಸವಾಲುಗಳ ಮೇಲೆ ಬೆಳಕು ಚೆಲ್ಲುತ್ತದೆ.
ಕಾಲಾಂತರದಲ್ಲಿ ಸ್ವಜಾತಿ ದಲಿತ ನಾಯಕರ ದುರಾಸೆಯ ದೆಸೆಯಿಂದಾಗಿ ದಲಿತ ಚಳುವಳಿಯ ಮೂಲ ಉದ್ದೇಶಗಳಲ್ಲುಂಟಾಗುತ್ತಿರುವ, ಮನುಷ್ಯ ಬದುಕಿಗೆ ವಿರುದ್ಧವಾದ ಪಲ್ಲಟಗಳನ್ನು ಕಾದಂಬರಿಯ ಮುಖ್ಯಪಾತ್ರ ರಾಜಯ್ಯನ ವಿಕ್ಷಿಪ್ತ ಬದುಕಿನ ಮೂಲಕ ಅನಾವರಣ ಮಾಡುತ್ತಲೇ ಈ ಹೊತ್ತು ಅಮಾಯಕ ದಲಿತ ಜನಾಂಗದ ಕಟ್ಟಕಡೆಯ ಮನುಷ್ಯ ನಿರ್ವಹಿಸುತ್ತಿರುವ ಅತಿ ಘೋರ ಬದುಕಿನ ಚಿತ್ರಣವನ್ನು ಕಣ್ಮುಂದೆ ತರುತ್ತದೆ.
(ಹೊಸತು, ಜುಲೈ 2015, ಪುಸ್ತಕದ ಪರಿಚಯ)
'ಕರಿ ಮೆಣಸಿನ ಗಿಡ' ಸೃಜನ್ ಅನುವಾದಿಸಿರುವ ತೆಲುಗು (ಮೂಲ ಲೇಖಕರು : ಡಾ|| ವಿ. ಚಂದ್ರಶೇಖರರಾವ) ಕಾದಂಬರಿ, ಮೂಲತಃ ಕಲಾವಿದರಾಗಿರುವ ಸೃಜನ್ ಅವರ ಕೈಯಲ್ಲಿ ಈ ಕಾದಂಬರಿಯ ಅನುವಾದವು ಕುಸುರಿ ಕಲೆಯಂತೆ ಅರಳುತ್ತ, ನಿಧಾನವಾಗಿ ವಸ್ತುವಿನುದ್ದಕ್ಕೂ ಜೀವಂತವಾಗಿ ವ್ಯಾಪಿಸುತ್ತ, ದಲಿತ ಜನಾಂಗವೊಂದು (ಮಾದಿಗ) ಪ್ರಸ್ತುತ ಸಂದರ್ಭದಲ್ಲಿ ಎದುರಿಸುತ್ತಿರುವ ಹೊಸ ಸಮಸ್ಯೆ-ಸವಾಲುಗಳ ಮೇಲೆ ಬೆಳಕು ಚೆಲ್ಲುತ್ತದೆ. ಕಾಲಾಂತರದಲ್ಲಿ ಸ್ವಜಾತಿ ದಲಿತ ನಾಯಕರ ದುರಾಸೆಯ ದೆಸೆಯಿಂದಾಗಿ ದಲಿತ ಚಳುವಳಿಯ ಮೂಲ ಉದ್ದೇಶಗಳಲ್ಲುಂಟಾಗುತ್ತಿರುವ, ಮನುಷ್ಯ ಬದುಕಿಗೆ ವಿರುದ್ಧವಾದ ಪಲ್ಲಟಗಳನ್ನು ಕಾದಂಬರಿಯ ಮುಖ್ಯಪಾತ್ರ ರಾಜಯ್ಯನ ವಿಕ್ಷಿಪ್ತ ಬದುಕಿನ ಮೂಲಕ ಅನಾವರಣ ಮಾಡುತ್ತಲೇ ಈ ಹೊತ್ತು ಅಮಾಯಕ ದಲಿತ ಜನಾಂಗದ ಕಟ್ಟಕಡೆಯ ಮನುಷ್ಯ ನಿರ್ವಹಿಸುತ್ತಿರುವ ಅತಿ ಘೋರ ಬದುಕಿನ ಚಿತ್ರಣವನ್ನು ಕಣ್ಮುಂದೆ ತರುತ್ತದೆ. ಇಡಿಯಾಗಿ, ಕಾದಂಬರಿಯ ಆಶಯ, ಪ್ರಾರಂಭದಲ್ಲಿ ಬರುವ ಪಾರಿವಾಳಗಳ ಚಿತ್ರಣ ಮತ್ತು ಆ ಮೂಲಕ ಕಥಾನಾಯಕ ರಾಜಯ್ಯನ ಮಗ ರೂಮಿಯ, ತನ್ನ ಅಪ್ಪನಿಗೆ ವಿರುದ್ಧವಾದ ಮನೋಸ್ಥಿತಿಯು ದಲಿತರು ತಮ್ಮ ಹಕ್ಕಿಗಾಗಿ ತಮ್ಮವರೊಂದಿಗೇನೆ ಹೋರಾಡಬೇಕಾದ ಅನಿವಾರ್ಯತೆ ಈ ಹೊತ್ತಿನ ತುರ್ತು- ಎಂಬ ಅರ್ಥದಲ್ಲಿ ಧ್ವನಿಸುತ್ತದೆ.
©2024 Book Brahma Private Limited.