ದಾಂಪತ್ಯ ಈ ಕಾದಂಬರಿಯ ಕಥಾವಿಷಯ.ಹಿಂದೆ ಹೆಚ್ಚಿಗೆ ಮದುವೆಗಳನ್ನು ಹಿರಿಯರು ನಿಶ್ಚಯಿಸುತಿದ್ದರು,ಮಕ್ಕಳಿಗೆ ಅವರ ಮೇಲೆ ನಂಬಿಕೆ,ಉತ್ತಮ ವಾದವರನ್ನೇ ನಮಗೆ ಆರಿಸುತ್ತಾರೆ ಎಂದು.ಕಾಲ ,ವಿಚಾರಗಳು ಬದಲಾದಂತೆ ಆಯ್ಕೆ,ಪ್ರೇಮವಿವಾಹ,ಪ್ರೀತಿಸಿ,ತಂದೆ ತಾಯಿಯರನ್ನು ಒಪ್ಪಿಸಿ ಮದುವೆ ಆಗುವುದು ಹೀಗೆ,ಹಲವಾರು ರೀತಿಯ ಮದುವೆಗಳು ಈಗಲೂ ಹಿರಿಯರು ನೋಡಿ ಮಾಡುವ ಮದುವೆ ಗಳನ್ನು ಒಪ್ಪಿಕೊಳ್ಳುವವರೂ ಇದ್ದಾರೆ.ಆದರೆ ಮದುವೆಯ ನಂತರ ಆಗುವ ಒಳಿತು, ಕೆಡುಕುಗಳು ಎಲ್ಲಾ ರೀತಿಯ ಮದುವೆಗಳಲ್ಲೂ ಇವೆ. ಹಿರಿಯರು ಮಾಡಿದ ಮದುವೆಗಳಲ್ಲಿ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಸಮಯ ಬೇಕು .ಪರಸ್ಪರ ಪ್ರೀತಿ,ನಂಬಿಕೆ, ಗೌರವ, ಹೊಂದಾಣಿಕೆ ಎಲ್ಲವೂ ಇದ್ದಾಗ ಜೀವನ ಸೊಗಸು ಇಲ್ಲವಾದರೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಗಳಿದ್ದರೆ ಮಾತಾಡಿ,ಅವರುಗಳೇ ಬಗೆಹರಿಸಿಕೊಳ್ಳಬಹುದು,ಕೆಲವು ಸಮಸ್ಯೆಗಳು ಹಿರಿಯರ ಮುಂದೆ ಬರುತ್ತವೆ,ಅವರೂ ಬುದ್ಧಿ ಹೇಳಿ ದಂಪತಿಗಳು ಒಂದಾಗಿರುವಂತೆ ಮಾಡುತ್ತಾರೆ.ಆದರೆ ಕೆಲವು ಸಮಸ್ಯೆಗಳು ಬಗೆಹರಿಯಲಾರದ್ದು ಎನಿಸಿದಾಗ,ಇಬ್ಬರ ಒಳಿತಿಗಾಗಿ ವಿಚ್ಛೇದನಕ್ಕೆ ನಿರ್ಧರಿಸುತ್ತಾರೆ.ಈ ಕಾದಂಬರಿಯಲ್ಲಿ ಶರತ್ ಮತ್ತು ವರ್ಣ ವಿಚ್ಛೇದನಕ್ಕೆ ಸಹಿ ಹಾಕಿರುತ್ತಾರೆ, ಕಾರಣ? ಕಾದಂಬರಿಯೊಳಗಿದೆ.
©2024 Book Brahma Private Limited.