ಸಾಯಿಸುತೆಯವರ ಈ ಕಾದಂಬರಿಯ ಕುರಿತು ಬಂದ ಒಂದು ಪ್ರತಿಕ್ರಿಯೆಯ ಹೀಗಿದೆ. ಕಾದಂಬರಿ ಓದಿದ ಓದುಗರ ಪತ್ರ: ‘ಗ್ರೀಷ್ಮಾದಲ್ಲಿ ಸೊಬಗನ್ನ ಹುಡುಕಿದೆ. ಕೆಂಡಾಮಂಡಲ ಬಿಸಿಲು ಭೂಮಿಯ ರಸವನ್ನು ಹೀರಿ-ಬತ್ತಿದ ಕೊಳ, ಕಾಡ್ಗಿಚ್ಚು. ಒಣಗಿದ ಮರಗಿಡಗಳು, ನೀರಿನ ಬರ, ಬಾಯಾರಿಕೆ - ಇಷ್ಟೆಲ್ಲದರಲ್ಲು ಗಂಭೀರ ಅರ್ಥವಿದೆ. ಅದನ್ನ ಹೇಗೆ ಸಾಧ್ಯ ಮಾಡಿದ್ದೀರಿ? ಪುಟ್ಟ ಕವನದಂತೆ, ಅದ್ಭುತವಾದ ಕಾವ್ಯದಂತೆ, ಸಮಗ್ರವಾದ ಕಾದಂಬರಿ ಮೋಡಿಗಾರಿಕೆಗೆ ನಮ್ಮನ್ನು ಒಳಪಡಿಸಿದ್ದೀರಿ. ಇದು ನಮಗೇಕೆ ಸಾಧ್ಯವಾಗಿಲ್ಲ?’ ಇಂಥದೊಂದು ಪ್ರಶ್ನೆಗೆ ಉತ್ತರ ಗೊತ್ತಿಲ್ಲ.ಬದುಕಿನ ಎಲ್ಲಾ ಮಜಲುಗಳ ಹುಡುಕಾಟವನ್ನು ಪಾತ್ರವಾಗಿಸಿ, ಸನ್ನಿವೇಶವಾಗಿಸಿ, ತೀರಾ ಅಳೆದು ಸುರಿದು ವಿಚಿತ್ರವೆನ್ನುವಂತೆ ನೆಲದ ತಂಪನ್ನು ಹೀರುವ, ಬೆವರು ಹರಿಸುವ ವಸಂತದ ನಂತರದ ಗ್ರೀಷ್ಮಾವನ್ನು ಆಯ್ದುಕೊಂಡಿದ್ದೇನೆ. ವರ್ಷದ ನಾಲ್ಕು ಋತುಗಳನ್ನು ನೆನಪಿಸಿದ ಈ ಹೆಸರು ಇಷ್ಟವೇ, ನಿಮಗೂ ಇಷ್ಟವೆನಿಸಬಹುದು.
©2024 Book Brahma Private Limited.