ಹಿಂದೆ ವಿವಾಹಗಳು ಸ್ವರ್ಗದಲ್ಲಿ ನಡೆಯುತ್ತೆ ಎನ್ನುವ ಮಾತೊಂದಿತ್ತು. ಆದರೆ ಈಗ ವಧು-ವರರ ಮಾಹಿತಿ ಕೇಂದ್ರ, ಆನ್‌ಲೈನ್ ಮ್ಯಾರೇಜ್ ಬ್ಯೂರೋಗಳ ಮೂಲಕ ಮದುವೆಗಳು ನಡೆಯುತ್ತೆ. ವಿವಾಹವೆನ್ನುವ ಕಲ್ಪನೆ ಯುವ ಜನತೆಯಲ್ಲಿ ಬೇರೆ ರೂಪ ತಾಳುತ್ತಿದ್ದು , ಒಂದು ಮಾಹಿತಿ ಪ್ರಕಾರ ವಿವಾಹವಾಗುತ್ತಿರುವವರ ಸಂಖ್ಯೆಗಿಂತ ವಿಚ್ಛೇದಿತರ ಸಂಖ್ಯೆ ಹೆಚ್ಚಾಗುತ್ತಿದೆ! ಇದಕ್ಕೆ ಕಾರಣವೇನು? ಯುವ ಜನತೆ ಹೆಚ್ಚು ಪ್ರಬುದ್ಧರಾಗುತ್ತಿರುವುದು ಕಾರಣವಾ? ಕಾರನದ ಪಟ್ಟಿ ದೊಡ್ಡದಾಗಬಹುದು. ನಾನು ‘ಭಾವ ಸರೋವರ’ ಕಾದಂಬರಿ ಬರೆದಾಗ ‘ಹಕ್ಕು, ಅಧಿಕರ ಇಲ್ಲದ ಜೊತೆಗಾರ’ನ ಜೊತೆ ವಾಸಿಸುವುದು ಅಷ್ಟು ಚಲಾವಣೆಯಲ್ಲಿ ಇರಲಿಲ್ಲ. ಈಗ ‘ಲಿವಿಂಗ್-ಟು-ಗೆದರ್’, ‘ಲೀವ್-ಇನ್-ರಿಲೇಷನ್’ - ಇಷ್ಟಪಟ್ಟು ಒಟ್ಟೊಟ್ಟಿಗೆ ವಾಸಿಸುತ್ತಾರೆ. ಆಗ ಇಂಥ ಸಂಬಂಧ, ತಾಯ್ತನ ತಪ್ಪಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ ಎನ್ನುತ್ತಾರೆ ಕಾದಂಬರಿಗಾರ್ತಿ.
©2024 Book Brahma Private Limited.