ಕವಿ ಕಾಳಿದಾಸನು ಸಂಸ್ಕೃತದಲ್ಲಿ ಬರೆದ ಮಹಾಕಾವ್ಯಗಳ ಪೈಕಿ ಮೇಘದೂತ ಸಹ ಒಂದು. ಯಕ್ಷನು ತನ್ನ ವಿರಹ ವೇದನೆಯನ್ನು ಮೇಘಗಳ ಮೂಲಕ ತನ್ನ ಪ್ರಿಯೆಗೆ ಕಳುಹಿಸುವ ಕಾವ್ಯವಿದು. ಶೃಂಗಾರ, ಅಲಂಕಾರ, ಉಪಮೆ, ರೂಪಕಗಳಿಂದ ತುಂಬಿದ ಈ ಕಾವ್ಯವನ್ನು ಸಂಸ್ಕೃತದಿಂದ ಲೇಖಕ ಡಾ. ಅ.ರಾ. ಮಿತ್ರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾಷೆಯು ತೀರಾ ಸರಳವಾಗಿದ್ದು, ಮೂಲ ಕೃತಿಗೆ ಯಾವುದೇ ಧಕ್ಕೆಯಾಗಿಲ್ಲದಂತೆ ಎಚ್ಚರವಹಿಸಿದ್ದೇ ಈ ಕೃತಿಯ ವಿಶೇಷತೆಯಾಗಿದೆ. ಸಂಸ್ಕೃತದ ಮೇಘದೂತವನ್ನು ಇತರೆ ಹಲವು ಕವಿಗಳು ಕನ್ನಡಕ್ಕೆ ಅನುವಾದಿಸಿದ್ದು, ಆ ಪೈಕಿ, ಅಂತಹವರ ದಿಗ್ಗಜರ ಸಾಲಿನಲ್ಲಿ ಈ ಕೃತಿಯೂ ಸೇರುತ್ತದೆ.
ಪ್ರೊ.ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರರು (ಅ.ರಾ.ಮಿತ್ರ) 1935ರ ಫೆಬ್ರುವರಿ 25 ರಂದು ಜನಿಸಿದರು. ಕನ್ನಡ ಉಪನ್ಯಾಸಕರಾಗಿಯೂ, ಖಾಸಗಿ ದೂರದರ್ಶನದ ಹಾಸ್ಯಕೂಟಗಳಲ್ಲಿ ಸಹಸಂಚಾಲಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.ತಂದೆ ರಾಮಣ್ಣ,ತಾಯಿ ಜಯಲಕ್ಷ್ಮಮ್ಮ. ಶಾಸ್ತ್ರ ಸಾಹಿತ್ಯ ಛಂದೋಮಿತ್ರ - ಕನ್ನಡ ಸಾಹಿತ್ಯದಲ್ಲಿ ಬಳಕೆಯಾಗಿರುವ ವಿವಿಧ ಛಂದೋಪ್ರಕಾರಗಳ ಲಕ್ಷಣೋದಾಹರಣಸಹಿತ ಪರಿಚಯ ಮಾಡಿಕೊಡುವ ಗ್ರಂಥ. ಪ್ರಬಂಧ ಸಂಕಲನ: ಬಾಲ್ಕನಿಯ ಬಂಧುಗಳು ಯಾರೊ ಬಂದಿದ್ದರು, ಸಂಕಲ್ಪಗಳು, ನಾನೇಕೆ ಕೊರೆಯುತ್ತೇನೆ, ಆರತಕ್ಷತೆ, ವ್ಯಕ್ತಿ ಪರಿಚಯ: ಕೈಲಾಸಂ, ಹಿರಿಯಡ್ಕ ರಾಮರಾಯ ಮಲ್ಯ ವಿಮರ್ಶೆ: ವಚನಕಾರರು ಮತ್ತು ಶಬ್ದಕಲ್ಪ ಸಂಪಾದನೆ : ಲಲಿತ ಪ್ರಬಂಧಗಳು (ಇತರರೊಡನೆ) ಅಜಿತ ಪುರಾಣ ಸಂಗ್ರಹ, ಪಂಪಭಾರತ, ಗ್ರಹ ಪುರಂದರ ...
READ MORE