ಹಡಗಿನಿಂದ ಹೊರದಬ್ಬಿಸಿಕೊಂಡ ನಾವಿಕನೊಬ್ಬ ಹಲವು ತಿಂಗಳುಗಳ ಕಾಲ ನಿರ್ಜನ ದ್ವೀಪದಲ್ಲಿ ಕಳೆದ ನೈಜಕತೆಯನ್ನು ಆ ನಾವಿಕನಿಂದಲೇ ಕೇಳಿ ಬರೆದ ಕೃತಿ ಇದು. ಪ್ರವಾಸ ಕಥನ, ಅನುಭವ ಕಥನ, ಸಾಹಸಗಾಥೆ ಹೀಗೆ ಯಾವ ಪ್ರಕಾರಕ್ಕೂ ಸಲ್ಲುವ ಕೃತಿ ಡೇನಿಯಲ್ ಡೀಪೋನ ಕಲಾತ್ಮಕತೆಗೆ ಸಾಕ್ಷಿಯಾಗಿದೆ.
ಅವನ ಕಥಾನಾಯಕ ರಾಬಿನ್ಸನ್ ಕ್ರೋಸೋ. ಆದರೆ ಈತನೇ ಕೃತಿಯನ್ನು ಬರೆದಿದ್ದಾನೆ ಎನ್ನುವಷ್ಟರ ಮಟ್ಟಿಗೆ ಮೊದಮೊದಲಿನ ಓದಗರನ್ನು ಡೀಪೊ ಪ್ರಭಾವಿಸಿದ್ದ. ಕನ್ನಡಕ್ಕೆ ಕೃತಿಯನ್ನು ತಂದಿರುವುದು ಆನಂದ ಅವರು.
’ಆನಂದ’ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ಅಜ್ಜಂಪುರ ಸೀತಾರಾಂ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು. ಮಾಸ್ತಿಯವರ ಸಣ್ಣಕಥಾ ಪರಂಪರೆಯಲ್ಲಿ ಆನಂದರು ಹೆಜ್ಜೆಗುರುತು ಮೂಡಿಸುವ ಬರವಣಿಗೆ. ಇವರು ಜನಿಸಿದ್ದು 1902 ಆಗಸ್ಟ್ 18ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ಜನಿಸಿದರು. ಸೀತಾರಾಮ್ ಅವರ ಪ್ರಾರಂಭಿಕ ಶಿಕ್ಷಣ ಆಂಗ್ಲೋವರ್ನಾಕ್ಯುಲರ್ ಶಾಲೆಯಲ್ಲಿ ನಡೆಯಿತು. ಹೈಸ್ಕೂಲು ಹಾಗೂ ಜ್ಯೂನಿಯರ್ ಕಾಲೇಜು ವಿದ್ಯಾಭ್ಯಾಸ ಶಿವಮೊಗ್ಗದಲ್ಲಿ ನಡೆಯಿತು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್‌ಸಿ ಪದವಿ ಗಳಿಸಿದರು. ಕೈಲಾಸಂರವರು ಶಿವಮೊಗ್ಗದಲ್ಲಿದ್ದಾಗ ಅವರ ಪ್ರಭಾವಕ್ಕೆ ಒಳಗಾಗಿದ್ದರು. ಹೈಸ್ಕೂಲಿನಲ್ಲಿ ಗುರುಗಳಾಗಿ ದೊರೆತಿದ್ದ ಎಂ.ಆರ್.ಶ್ರೀ ಮತ್ತು ಕುಕ್ಕೆ ಸುಬ್ರಹ್ಮಣ್ಯಶಾಸ್ತ್ರಿಗಳು ಸಾಹಿತ್ಯಾಭ್ಯಾಸಕ್ಕೆ ಉತ್ತೇಜನ ...
READ MORE