ಆಂಗ್ಲ ಲೇಖಕ ಅಯನ್ ರಾಂಡ್ ಅವರ `ದಿ ಫೌಂಟೇನ್ ಹೆಡ್’ ಕೃತಿಯನ್ನು ಕನ್ನಡಕ್ಕೆ `ಸೂರ್ಯಶಿಖರ’ ಎಂಬ ಹೆಸರಿನಲ್ಲಿ ಅನುವಾದಿಸಿದವರು ರಾಜಣ್ಣ ತಗ್ಗಿ. ತನ್ನನ್ನು ತಾನು ಕಳೆದುಕೊಳ್ಳದೆ ಒಬ್ಬ ವ್ಯಕ್ತಿ ತನಗಾಗಿ ಮಾತ್ರವೇ ನಿರ್ಧಾರಗಳನ್ನು ತೆಗೆದುಕೊಂಡರೆ ಅವನು ಜಯಶಾಲಿಯಾಗುವುದೇ ಅಲ್ಲದೆ , ಸಂತೋಷದಿಂದ ಇರಲು ಸಾಧ್ಯವಿದೆ ಎಂದು ಹೇಳುವುದೇ ಅಯಾನ್ ರಾಂಡ್ ಅವರ ಮುಖ್ಯ ಉದ್ದೇಶ.
ಒಬ್ಬ ಮನುಷ್ಯ ಹೇಗಿರಬೇಕೋ ಇವನಿಗೆ ಗೊತ್ತಿಲ್ಲ. ಹಾಗೆ ಇರಲಾರ ಕೂಡ..‘ಎ ಮ್ಯಾನ್ ಹು ನೆವರ್ ಕುಡ್ ಬಿ ಡಸನ್ಟ್ ನೋ ಇಟ್’ ಅಯನ್ ರಾಂಡ್ ಅವರ ದಿ ಫೌಂಟೇನ್ ಹೆಡ್ ಕಾದಂಬರಿಯ ಸಂಕ್ಷಿಪ್ತ ರೂಪವೇ ಈ ಸೂರ್ಯಶಿಖರ. ಕಥಾ ವಸ್ತು ಮತ್ತು ಓಘಕ್ಕೆ ಧಕ್ಕೆ ಬರದ ಹಾಗೆ ಸಿದ್ಧಪಡಿಸಿದ ಅಮೂಲ್ಯ ಕೃತಿ ಎಂಬುದಾಗಿ ಕೃತಿಯ ಲೇಖಕ ರಾಜಣ್ಣ ತಗ್ಗಿ ಅವರು ಬರೆದುಕೊಂಡಿದ್ದಾರೆ.
ಕನ್ನಡದ ಯುವ ಸಂಶೋಧಕ, ಅನುವಾದಕ ಟಿ.ಡಿ. ರಾಜಣ್ಣ ತಗ್ಗಿ ಅವರು ಮೂಲತಃ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ತಗ್ಗಿಹಳ್ಳಿಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ, ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಗಳನ್ನು ಪಡೆದಿರುವ ಅವರು ಮದರಾಸು ವಿಶ್ವವಿದ್ಯಾಲಯ ಹಾಗೂ ಜೈನ್ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮೌಲಿಕ ಪ್ರಬಂಧಗಳನ್ನು ಮಂಡಿಸಿರುವ ರಾಜಣ್ಣ ತಗ್ಗಿ ಅವರು ಮದರಾಸು , ಬೆಂಗಳೂರು ಮತ್ತು ಗುಲಬರ್ಗಾ ಆಕಾಶವಾಣಿ ಕೇಂದ್ರಗಳಲ್ಲಿಯೂ ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಭಾಷೆ ಬಲ್ಲವರಾಗಿದ್ದು, ...
READ MORE