ಮುಂಬೆಳಕು

Author : ಸಾರಾ ಅಬೂಬಕ್ಕರ್

Pages 200

₹ 160.00




Year of Publication: 2012
Published by: ಚಂದ್ರಗಿರಿ ಪ್ರಕಾಶನ
Address: ದಕ್ಷಿಣ ಕನ್ನಡ

Synopsys

‘ಮುಂಬೆಳಕು’ ಕೃತಿಯು ಖದೀಜಾ ಮುಮ್ತಾಜ್ ಅವರ ಮಲಯಾಳಂ ನಲ್ಲಿ ಬರೆದ ‘ಬರ್ಸಾ’ ಕಾದಂಬರಿಯ ಅನುವಾದವಾಗಿದೆ. ಕನ್ನಡಕ್ಕೆ ಸಾರಾ ಅಬೂಬಕ್ಕರ್ ಅವರು ಅನುವಾದಿಸಿದ್ದಾರೆ. ಪ್ರಬಲ ಪುರುಷ ಪ್ರಧಾನ ವ್ಯವಸ್ಥೆಯ ಬಿಗಿಹಿಡಿತದ ನಡುವೆಯೂ ಆಧುನಿಕ ವಿದ್ಯಾಭ್ಯಾಸದ ನಂತರದ ದಿನಗಳಲ್ಲಿ ತಸ್ಲಿಮಾ ನಸ್ತೀನ್, ಅಮೀನಾ ವುದೂದ್ ಮುಂತಾದ ಸ್ತ್ರೀಯರು ಧಾರ್ಮಿಕ ದೌರ್ಜನ್ಯ, ಸ್ತ್ರೀ ಶೋಷಣೆ, ಇಸ್ಲಾಮಿಕ್ ಫೆಮಿನಿಸಂ ಬಗ್ಗೆ ತಮ್ಮ ಕೃತಿಗಳಲ್ಲಿ ದಾಖಲಿಸಿದ್ದಾರೆ. ಬದುಕಿನ ಎಲ್ಲ ವ್ಯವಹಾರಗಳಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸುವ ಇಸ್ಲಾಮನ್ನು, ಕಟ್ಟುಪಾಡುಗಳನ್ನು ಹೇರಿ ಸ್ತ್ರೀಯರನ್ನು ದಾಸ್ಯದಲ್ಲಿ ಕೆಡಹುವ ವ್ಯವಸ್ಥೆಯನ್ನು ಸ್ತ್ರೀವಾದಿಗಳು ನಿರಾಕರಿಸಿದ್ದಾರೆ. ಇತರ ರಾಷ್ಟ್ರಗಳಿಂದ ದುಡಿಮೆಗಾಗಿ ಬರುವ ಸೌದಿ ಆರೇಬಿಯದ ನೆಲದಲ್ಲಿ ನಡೆದಂತೆ ಚಿತ್ರಿಸಿ, ಪಾತ್ರಗಳ ಮೂಲಕ ಇಡೀ ಇಸ್ಲಾಂ ಸಮುದಾಯದ ಒಳಹೊರಗನ್ನು ತೆರೆದುತೋರಿಸಿದ್ದಾರೆ.

About the Author

ಸಾರಾ ಅಬೂಬಕ್ಕರ್
(30 June 1936 - 10 January 2023)

ಕನ್ನಡದ ಪ್ರಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ಅವರು 1936ರ ಜೂನ್ 30ರಂದು  ಕಾಸರಗೋಡಿನ ಚಂದ್ರಗಿರಿ ತೀರದ  ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾದಿಗಳಾಗಿದ್ದ ಪಿ. ಅಹಮದ್ ಅವರು ಮತ್ತು  ತಾಯಿ ಚೈನಾಬಿ ಅವರು. ಸಾರಾ ಅವರ ಪ್ರಾಥಮಿಕ ವಿದ್ಯಾಭ್ಯಾಸ ಅವರ ಹುಟ್ಟಿದೂರಿನಲ್ಲೇ ನೆರವೇರಿತು.  ಮುಂದೆ ಅವರು ಹೈಸ್ಕೂಲುವರೆಗೆ ಕಲಿತದ್ದು ಕಾಸರಗೋಡಿನಲ್ಲಿ. ಎಂಜನಿಯರ್ ಆಗಿದ್ದ ಅಬೂಬಕ್ಕರ್‌ ಅವರೊಡನೆ ಸಾರಾ ಅವರ ವಿವಾಹ ಏರ್ಪಟ್ಟು ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ  ಕಾರಂತರು, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ...

READ MORE

Reviews

(ಹೊಸತು, ಜೂನ್ 2012, ಪುಸ್ತಕದ ಪರಿಚಯ)

ಲೇಖಕಿ ಡಾ।। ಖದೀಜಾ ಮುತ್ತಾಜ್ ಮಲಯಾಳಂನಲ್ಲಿ ಬರೆದ 'ಬರ್ಸಾ' ಕಾದಂಬರಿಯ ಅನುವಾದ. ಇಲ್ಲಿ ಮುಸ್ಲಿಂ ಧಾರ್ಮಿಕ ಕಟ್ಟುಪಾಡುಗಳ ಮಧ್ಯೆ ಅದಕ್ಕಿದಿರಾಗಿ ಸ್ತ್ರೀವಾದಿ ಮನೋಭಾವನೆಯೊಂದು ಅರಳಿ ನಿಂತು ತನ್ನ ಸುಗಂಧ ಬೀರುತ್ತಿದೆ. ಪ್ರಬಲ ಪುರುಷ ಪ್ರಧಾನ ವ್ಯವಸ್ಥೆಯ ಬಿಗಿಹಿಡಿತದ ನಡುವೆಯೂ ಆಧುನಿಕ ವಿದ್ಯಾಭ್ಯಾಸದ ನಂತರದ ದಿನಗಳಲ್ಲಿ ತಸ್ಲಿಮಾ ನಸ್ತೀನ್, ಅಮೀನಾ ವುದೂದ್ ಮುಂತಾದ ಸ್ತ್ರೀಯರು ಧಾರ್ಮಿಕ ದೌರ್ಜನ್ಯ, ಸ್ತ್ರೀ ಶೋಷಣೆ, ಇಸ್ಲಾಮಿಕ್ ಫೆಮಿನಿಸಂ ಬಗ್ಗೆ ತಮ್ಮ ಕೃತಿಗಳಲ್ಲಿ ದಾಖಲಿಸಿದ್ದಾರೆ. ಬದುಕಿನ ಎಲ್ಲ ವ್ಯವಹಾರಗಳಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸುವ ಇಸ್ಲಾಮನ್ನು, ಕಟ್ಟುಪಾಡುಗಳನ್ನು ಹೇರಿ ಸ್ತ್ರೀಯರನ್ನು ದಾಸ್ಯದಲ್ಲಿ ಕೆಡಹುವ ವ್ಯವಸ್ಥೆಯನ್ನು ಸ್ತ್ರೀವಾದಿಗಳು ನಿರಾಕರಿಸಿದ್ದಾರೆ. ಇತರ ರಾಷ್ಟ್ರಗಳಿಂದ ದುಡಿಮೆಗಾಗಿ ಬರುವ ಸೌದಿ ಆರೇಬಿಯದ ನೆಲದಲ್ಲಿ ನಡೆದಂತೆ ಚಿತ್ರಿಸಿ, ಪಾತ್ರಗಳ ಮೂಲಕ ಇಡೀ ಇಸ್ಲಾಂ ಸಮುದಾಯದ ಒಳಹೊರಗನ್ನು ತೆರೆದುತೋರಿಸಿದ್ದಾರೆ. ಇದೊಂದು ಎಲ್ಲ ರೀತಿಯ ಜನರ ಜೀವನದ ಕಥಾನಕವೂ ಆಗಿದ್ದು ಪ್ರತಿಯೊಬ್ಬನ ಸ್ವಂತ ನೆಲೆಯಲ್ಲಿನ ಆಗುಹೋಗುಗಳವೆ. ಚೌಕಟ್ಟು ಮಾತ್ರ ಇಸ್ಲಾಂನದ್ದು, ಅನೇಕ ಪ್ರಶ್ನೆಗಳು ಇಲ್ಲಿ ಉದ್ಭವಿಸುತ್ತವೆ. ಇಸ್ಲಾಂನಲ್ಲಿ ಅದಕ್ಕೆ ಉತ್ತರವಿಲ್ಲ: ಪ್ರಶ್ನೆಗಳನ್ನು ಕೇಳಬಾರದೆ೦ಬ ಉತ್ತರ ಮಾತ್ರ ಇರುತ್ತದೆ. ಶ್ರೀಮತಿ ಸಾಧಾ ಅಬೂಬಕ್ಕರ್ ಇದನ್ನು ಸೊಗಸಾಗಿ ಅನುವಾದಿಸಿದ್ದಾರೆ. 

Related Books