ಲೇಖಕ ತೆಹಮಿನಾ ದುರ್‍ರಾನಿ ಅವರ ಆಂಗ್ಲ ಕಾದಂಬರಿಯನ್ನು ವಿಚಾರವಾದಿ ಚಿಂತಕ ರಾಹು (ಆರ್.ಕೆ. ಹುಡಗಿ) ಅವರು ಕನ್ನಡಕ್ಕೆ ಅನುವಾದಿಸಿದ್ದೇ -ಪೀಠಾಧಿಪತಿಯ ಪತ್ನಿ. ಪ್ರೀತಿ-ಪ್ರೇಮ, ಸಮತೆ-ಸೈರಣೆ, ರೀತಿ-ನೀತಿ ಎಲ್ಲವನ್ನೂ ಮಠಗಳಲ್ಲಿ ಬಲಿಕೊಡಲಾಗಿದೆ. ಇಂತವರ ದ್ವಿಮುಖ ವರ್ತನೆಗಳು, ಅರ್ಥರಹಿತ ಆಚರಣೆಗಳು, ಬದುಕಿನ ಕ್ರೌರ್ಯ , ಅಮಾನವೀಯತೆ ಎಲ್ಲವನ್ನು ಪೀಠ’ ಹಾಗೂ ಅದರ ಅಧಿಪತಿಯ ಸುತ್ತ ಹೆಣೆದ ಕಾದಂಬರಿ ಇದು. ಪಾಕಿಸ್ತಾನದ ಸೂಫಿ ಪರಂಪರೆಯ ಒಂದು ಪೀಠದ ಅಧಿಪತಿಯ ಬದುಕಿನ ಅಂತರಂಗ- ಬಹಿರಂಗಗಳನ್ನು ಬಿಚ್ಚಿಡುವ ಮೂಲಕ ಧಾರ್ಮಿಕ ಸೋಗಲಾಡಿಗಳ ಚಕ್ರವ್ಯೂಹದಲ್ಲಿ ಸಿಕ್ಕಿ ಬಿದ್ದ ಒಬ್ಬ ಮಹಿಳೆಯ ದುರಂತ ಕಥೆಯನ್ನುಈ ಕಾದಂಬರಿ ಹೇಳುತ್ತದೆ. ಇಡೀ ಪಾಕಿಸ್ತಾನದ, ಅ ಮೂಲಕ ಇಡೀ ಜಗತ್ತಿನ ಧರ್ಮಾಧಿಕಾರಿಗಳು ಹಾಗೂ ರಾಜಕಾರಿಣಿಗಳ ಗೌಪ್ಯ ಒಪ್ಪಂದದ ದುಷ್ಟಕೂಟ ಅಂದರೆ ಪಾಶವೀ ಗುಣಲಕ್ಷಣಗಳನ್ನು ಚಿತ್ರಿಸುತ್ತದೆ. ಪುರುಷ ದುರಾಕ್ರಮಣಶಾಹೀ ಸಮಾಜೋ-ಸಾಂಸ್ಕೃತಿಕ ಮೌಲ್ಯಗಳ ಹುದುಲಲ್ಲಿ ಸಿಕ್ಕ ಮಹಿಳೆಯರು ಹೇಗೆ ಕೊನೆಗೂ ಪುರುಷ ಪ್ರಧಾನ ಸಮಾಜದ ಕ್ರೌರ್ಯಕ್ಕೆ ಬಲಿಯಾಗುತ್ತಾರೆ ಎಂಬುದನ್ನು ಕಾದಂಬರಿ ಬಿಂಬಿಸುತ್ತದೆ.
©2024 Book Brahma Private Limited.