ಗಾಡ್‌ ಫಾದರ್

Author : ನೇಸರ ಕಾಡನಕುಪ್ಪೆ

Pages 240

₹ 250.00




Year of Publication: 2023
Published by: ಸಂವಹನ ಪ್ರಕಾಶನ
Address: ರಾಜೇಂದ್ರ ಪ್ರಿಂಟರ್ಸ್ ಆಂಡ್ ಪಬ್ಲಿಷರ್ಸ್, 12/1,  ಇವಿನಿಂದ ಬಜಾರ್ ಹಿಂದೆ, ಶಿವರಾಂ ಪೇಟೆ, ಮೈಸೂರು
Phone: 9902639593

Synopsys

ಗಾಡ್ ಫಾದರ್ ಕಾದಂಬರಿ ಮತ್ತು ಅದರ ಆಧಾರಿತ ಚಲನಚಿತ್ರವು ಸಾಹಿತ್ಯ ಮತ್ತು ಜಾಗತಿಕ ಚಲನಚಿತ್ರ ರಂಗಗಳಲ್ಲಿ ಚಿರಪರಿಚಿತ. ಎಲ್ಲಾ ಕಾಲಕ್ಕೂ 'BEST SELLER' ಎಂಬ ನಾಮಾಂಕಿತ ಹೊಂದಿರುವ ಗಾಡ್ ಫಾದರ್ 1969ರಲ್ಲಿ ಪ್ರಕಟಗೊಂಡು ಅಪರಾಧ ವಸ್ತುವಿಷಯದ ಕಾದಂಬರಿಗಳ ಜಗತ್ತಿನಲ್ಲಿ ಅಪೂರ್ವ ಸಂಚಲನ ಮೂಡಿಸಿದ ಕೃತಿ. ಇದರ ಕರ್ತೃ ಮಾರಿಯೋ ಪೂಜೋ. ಅಮೆರಿಕದ ನ್ಯೂಯಾರ್ಕ್ ನಗರದಲ್ಲಿನ ಇಟಲಿಯ ಮಾಫಿಯಾ ಕುಟುಂಬದವರ ಜೀವನದ ಸುತ್ತ ಹೆಣೆದ ಕಾಲ್ಪನಿಕ ಕಾದಂಬರಿಯಾದರೂ ಜಗತ್ತನ್ನೇ ಬೆರಗಾಗಿಸಿದ ಕೃತಿ ಇದು. ಡ್ರಗ್ಸ್, ಕೊಲೆ, ಸುಲಿಗೆ, ಬಂದೂಕಿನಂತಹ ಭೂಗತ ಚಟುವಟಿಕೆಗಳನ್ನು ಚಿತ್ರಿಸಿರುವ ಗಾಡ್‌ಫಾದ‌ರ್ ಚಲನಚಿತ್ರವಾಗಿ 70ರ ದಶಕದಲ್ಲಿ ಅದ್ಭುತ ಯಶಸ್ಸನ್ನು ಕಂಡಿತು. ಫ್ರಾನ್ಸೆಸ್ ಫೋರ್ಡ್ ಕೋಪ್ಪಾಲಾನ ಅತ್ಯಂತ ಶ್ರೇಷ್ಠ ಚಿತ್ರ. ಚಲನಚಿತ್ರ ಇತಿಹಾಸದಲ್ಲಿ ಮರೆಯಲಾಗದ ಶೈಲಿ ಮತ್ತು ಪ್ರಕಾರವನ್ನು ಇದು ಹುಟ್ಟುಹಾಕಿತು. ಈ ಶ್ರೇಷ್ಠ ಕಾದಂಬರಿಯನ್ನು ಮೊದಲ ಭಾಗವಾಗಿ ಕನ್ನಡಕ್ಕೆ ಅನುವಾದ ಮಾಡಿರುವ ಡಾ.ನೇಸರ ಕಾಡನಕುಪ್ಪೆ ಅವರ ಎದೆಗಾರಿಕೆಯನ್ನು ಮೆಚ್ಚಲೇಬೇಕು. ಇಡೀ ಕೃತಿಯಲ್ಲಿ ಅವರ ಸಾಮರ್ಥ್ಯ ಪ್ರತಿಬಿಂಬಿಸುತ್ತದೆ. ಅಂಗ್ಲಭಾಷಾ ಕಾದಂಬರಿಯನ್ನು ಸೊಗಸಾಗಿ ಅನುವಾದಿಸಿದ್ದಾರೆ. ಈ ಕಾದಂಬರಿಯ ಅನುವಾದವೇ ಒಂದು ದೊಡ್ಡ ಸವಾಲು. ಈ ಅನುವಾದ ಕೇವಲ ಭಾಷೆಗಷ್ಟೇ ಸೀಮಿತವಾಗಿಲ್ಲ. ಲೇಖಕರು ಮೂಲ ಕಥೆಗೆ ಧಕ್ಕೆ ಬಾರದ ರೀತಿಯಲ್ಲಿ ಉತ್ತಮವಾಗಿ ಅರ್ಥೈಸಿದ್ದಾರೆ. ಇವರ ಭಾಷಾ ಸಾಮರ್ಥ್ಯ ಮತ್ತು ಕಥೆಯ ಆಳವಾದ ಅಧ್ಯಯನದಿಂದಾಗಿ ಪಾಶ್ಚಾತ್ಯ ಜಗತ್ತಿನ ಭೂಗತ ಸಂಸ್ಕೃತಿ ಮತ್ತು ಕೌಟುಂಬಿಕ ಮೌಲ್ಯಗಳ ಮಾರಣಹೋಮದಂತಹ ವಿಷಯಗಳನ್ನು ಪ್ರಬುದ್ಧವಾಗಿ ಅನುವಾದಿಸಿದ್ದಾರೆ. ಡಾ.ನೇಸರ ಕಾಡನಕುಪ್ಪೆ ಮೂಲತಃ ಪತ್ರಕರ್ತರು. ಲೇಖಕರು ಮತ್ತು ವೃತ್ತಿಯಲ್ಲಿ ಪ್ರಾಧ್ಯಾಪಕರು, ಗಾಡ್ ಫಾದರ್ ಅನುವಾದಿತ ಕೃತಿಯಿಂದಾಗಿ ಲೇಖಕರು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡಿಗರಿಗೆ ಒಂದು ಶ್ರೇಷ್ಠ ಕೃತಿಯನ್ನು ಡಾ.ನೇಸರ ನೀಡಿದ್ದಾರೆ, ಈ ಕೃತಿ ಸಾಹಿತ್ಯ ಜಗತ್ತಿನ ಮೇಲೆ ಪ್ರಭಾವ ಬೀರುವ ಕಾದಂಬರಿ, ಇದೊಂದು ಮಹಾ ಕಾದಂಬರಿಯ ಉತ್ತಮ ಅನುವಾದಿತ ಕೃತಿ ಎಂದು ಪ್ರೊ.ಎನ್.ಉಷಾರಾಣಿ ಅವರು ಬೆನ್ನುಡಿಯಲ್ಲಿ ಬರೆದಿದ್ದಾರೆ.

About the Author

ನೇಸರ ಕಾಡನಕುಪ್ಪೆ
(20 November 1984)

ಮೂಲತಃ ಮೈಸೂರಿನವರಾದ ನೇಸರ ಕಾಡನಕುಪ್ಪೆ ಅವರು ಪತ್ರಕರ್ತರು. 14 ವರ್ಷಗಳ ಕಾಲ ಪ್ರಜಾವಾಣಿ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಮಂಗಳೂರಿನ ನಿಟ್ಟೆ ಸಂವಹನ ಸಂಸ್ಥೆಯಲ್ಲಿ ಸಹ ಪ್ರಾಧ್ಯಾಪಕರು. ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌ ಡಿ ಪದವಿ ಗಳಿಸಿದ್ಧಾರೆ. ಕನ್ನಡ ಸಾಹಿತ್ಯದ ಅನುವಾದ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರು ಮಾರಿಯೋ ಪೂಜೋ ಅವರ "ಗಾಡ್ ಫಾದರ್" ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books