ಹಿಂದಿ ಸಾಹಿತ್ಯದಲ್ಲಿ ಕಳೆದ ಮೂವತ್ತು ವರ್ಷಗಳಲ್ಲಿ ಬಂದ ಶ್ರೇಷ್ಠ ಕಾದಂಬರಿಗಳಲ್ಲಿ ಹಜಾರೀಪ್ರಸಾದ ದ್ವಿವೇದಿಯವರು ಬರೆದ ‘ಅನಾಮದಾಸನ ಕಡತ’ ಪರಿಗಣಿತವಾಗಿದೆ. ಈ ಕಾದಂಬರಿಯನ್ನು ಕನ್ನಡಕ್ಕೆ ಅದ್ಭುತವಾಗಿ ಅನುವಾದಿಸಿದವರು ಮ. ಸು. ಕೃಷ್ಣಮೂರ್ತಿಯವರು.
ಬ್ರಾಹ್ಮಣ ರೈಕ್ವ ಶೂದ್ರ ರಾಜಕುಮಾರಿಯನ್ನು ಮದುವೆಯಾಗುತ್ತಾನೆ, ಅವನು ತನ್ನ ಪ್ರಿಯೆ ರಾಜಕುಮಾರಿ ಜಾಬಾಲಾಳ ನೆನಪಿನಲ್ಲಿ ತನ್ನ ಬೆನ್ನು ಕೆರೆದುಕೊಳ್ಳುತಿರುತ್ತಾನೆ; ಒಮ್ಮೆ ವಿನೋದದಿಂದಾದರೆ, ಮತ್ತೊಮ್ಮೆ ಅರ್ಧಸಾಧನಾವಸ್ಥೆಯಲ್ಲಿ. ಇಂಥ ಪಾತ್ರದೊಂದಿಗೆ ಓದುಗ ವಿಚಿತ್ರವಾದ ತನ್ಮಯತೆಯನ್ನು ಅನುಭವಿಸುತ್ತಾನೆ. ಇಡೀ ಕಾದಂಬರಿಯಲ್ಲಿ ಒಂದು ಅಂತರ್ಗೀತೆಯಿರುವಂತೆ ಕಾಣುತ್ತದೆ, ರೈಕ್ವನ ಈ ಕಡಿತ, ಕೆರೆತ ಅದರ ಶ್ರುತಿ. ಉಪನಿಷತ್ಕಾಲೀನ ಜೀವನದ ಈ ಸರಳ ಸುಂದರ ಚಿತ್ರಣದಲ್ಲಿ ಧರ್ಮವಿದೆ, ದರ್ಶನವಿದೆ, ಕಲೆಯಿದೆ. ಆದರೆ ಎಲ್ಲೂ ಅವು ಹೊರೆಯಾಗಿಲ್ಲ.
©2024 Book Brahma Private Limited.