ಪಿ.ಶಿವಕಾಮಿಯವರು ತಮಿಳು ನಾಡಿನ ಪ್ರಮುಖ ದಲಿತ ಲೇಖಕಿ. ದಲಿತರ ಆಡು ಮಾತನಲ್ಲಿಯೇ ಸಂಕ್ರಾಂತಿಯನ್ನು ಬರೆದಿದ್ದಾರೆ. ಅದೇ ಮಾತಿನಲ್ಲಿ ಈ ಕೃತಿಯನ್ನು ರಚಿಸಿದ್ದಾರೆ. ಇದನ್ನು ತಮಿಳ್ ಸೆಲ್ವಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಒಟ್ಟಾರೆಯಾಗಿ ನಡೆಯುವ ಜಾತಿ ಹೋರಾಟ, ಮೇಲುಕೀಳಿನ ಭಾವ, ದಲಿತರಲ್ಲಿಯೇ ಇರುವ ಒಳಪಂಗಡಗಳ ನಡುವಿನ ತಿಕ್ಕಾಟ, ಹೆಣ್ಣು ಗಂಡಿನ ಸಂಬಂಧಗಳು, ಪುರುಷ ಪ್ರಧಾನ ಸಮಾಜದ ವಿವಿಧ ಮುಖಗಳು ಹಾಗೂ ಅಂತಹ ಪುರುಷ ನಾಯಕನ ಮಗಳು ತಂದೆಯ ವಿರುದ್ಧವೇ ಸಿಡಿದೇಳುವುದು, ರಾಜಕೀಯ ಲೆಕ್ಕಾಚಾರಗಳು, ನಟನೊಬ್ಬನ ಮೂಲಕ ಸಾಂಕೇತಿಕವಾಗಿ ಚಲನಚಿತ್ರವು ರಾಜಕೀಯ ಪ್ರವೇಶಮಾಡುವುದು, ಬಡತನ, ಪೊಲೀಸ್ ಆಡಳಿತ ಇವೆಲ್ಲಾ ಕಥೆಯ ಹರಿವಿನಲ್ಲಿ ಬರುವ ಪ್ರಮುಖ ಅಂಶಗಳಾಗಿವೆ.
©2024 Book Brahma Private Limited.