ಗಣಿತಶಾಸ್ತ್ರ ಬೋಧಕರಾಗಿದ್ದ ಚಾರ್ಲ್ಸ್ ಲುಡ್ವಿಗ್ ಡಾಡ್ಜ್ಸನ್ ಅವರು ಲೂಯಿ ಕರೋಲ್ ಎಂಬ ಹೆಸರಿನಲ್ಲಿ ಬರೆದ 'ಅಲೈಸ್ ಇನ್ ವಂಡರ್ಲ್ಯಾಂಡ್' ಎಂಬ ವಿಶಿಷ್ಟ ಕೃತಿಯಿದು.
ನಾ. ಕಸ್ತೂರಿಯವರು ಇದನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಕನ್ನಡದಲ್ಲಿ ಪಾಪಚ್ಚಿಯಾದ ಅಲೈಸ್ ಜಗತ್ತಿನಾದ್ಯಂತ ಎಲ್ಲಾ ವಯಸ್ಸಿನವರಿಗೂ ಅಚ್ಚುಮೆಚ್ಚಿನವಳಾಗಿದ್ದಾಳೆ. ಅನೈಚ್ಛಿಕವಾಗಿ ವಿಚಿತ್ರ ಲೋಕವೊಂದನ್ನು ಪ್ರವೇಶಿಸುವ ಪಾಪಚ್ಚಿ ಅಲ್ಲಿ ತನಗಾದ ಬೆರಗುಗಳಿಂದ ಓದುಗರನ್ನೂ ಬೆರಗುಗೊಳಿಸುತ್ತಾಳೆ. ಅಲ್ಲಿನ ಅವಳ ಅನುಭವ, ಅವಳು ನೋಡುವ ಪಕ್ಷಿ, ಪ್ರಾಣಿಗಳು, ಅಲ್ಲಿನ ರಾಜ ರಾಣಿಯರು ಮಕ್ಕಳಿಗೆ ಬಲು ಆಪ್ತರಾಗುತ್ತಾರೆ.
ಕೇರಳದ ತ್ರಿಪುನಿತ್ತೂರ್ ಗ್ರಾಮದಲ್ಲಿ ಜನಿಸಿದ ನಾ. ಕಸ್ತೂರಿ ಅವರು ಕೇರಳದ ಎರ್ನಾಕುಲಂ ಮಹಾರಾಜಾ ಕಾಲೇಜಿನಲ್ಲಿ ಶಿಕ್ಷಣ ಪಡೆದರು. ತಂದೆ ನಾರಾಯಣ. ಇತಿಹಾಸದಲ್ಲಿ ಸ್ನಾತಕೋತ್ತರ (ಎಂ.ಎ.) ಪಡೆದ ನಂತರ ಬಿ.ಎಲ್. ಪದವಿ ಪಡೆದರು. ವಕೀಲಿ ವೃತ್ತಿಗೆ ಸೇರುವ ಬದಲು ಶಿಕ್ಷಕ ವೃತ್ತಿಯತ್ತ ಹೊರಳಿದರು. ಮೈಸೂರಿಗೆ ಬಂದ ಅವರು ಅಲ್ಲಿನ ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. ನಾಟಕ, ಪ್ರಹಸನ, ಕಥೆ, ಕಾದಂಬರಿ ಮುಂತಾದ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಗಗ್ಗಯ್ಯನ ಗಡಿಬಿಡಿ, ಕಾಡಾನೆ, ವರಪರೀಕ್ಷೆ, ರಾಮಕೃಷ್ಣಯ್ಯನ ದರ್ಬಾರು, ಹೋಳು-ಬಾಳು, ಬ್ಯಾಂಕಿನ ದಿವಾಳಿ ಮುಂತಾದುವು ಅವರ ನಾಟಕಗಳು. ಗಾಳಿಗೋಪುರ, ಶಂಖವಾದ್ಯ, ರಂಗನಾಯಕಿ, ಅಲ್ಲೋಲ, ಕಲ್ಲೋಲ, ಉಪಾಯ ವೇದಾಂತ ಮುಂತಾದ ಹಾಸ್ಯ ಸಂಕಲನಗಳನ್ನು ರಚಿಸಿರುವುದಲ್ಲಿ ಹಾಸ್ಯ ...
READ MORE