ಈ ಕಾದಂಬರಿಯು 2006ರಲ್ಲಿ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು.
ಅಮಾತ್ರ ಎನ್ನುವುದು ಮಾಂಡೂಕ್ಯೋಪನಿಷತ್ ನಲ್ಲಿ ಕಾಣಸಿಗುವ ಒಂದು ಅಪರೂಪದ ಶಬ್ದ.12 ನೇ ಸೂತ್ರದಲ್ಲಿ ಬರುವ ಅಮಾತ್ರ ಶಬ್ದ ವು ಆರನೇ ಇಂದ್ರಿಯಕ್ಕೆ ಸಂಬಂಧಿಸಿರುತ್ತದೆ. ಕಥಾನಾಯಕನಿಗೆ ಕಣ್ಣು ,ಕಿವಿ ಸಂವೇದನೆ ಕಳೆದುಕೊಂಡಾಗ ಬರೀ ಸ್ಪರ್ಶ ಒಂದರಿಂದಲೇ ಲೇಖಕನಾಗುವ ಬಗೆಯನ್ನು ನನ್ನದೇ ಕಲ್ಪನೆಯ ಮೂಸೆಯಲ್ಲಿ ಕಾದಂಬರಿ ಹಂದರವಿದೆ.
ಇದು ಲೇಖಕರಿಗೆ ತುಂಬಾ ಪ್ರಿಯವಾದ ಕಾದಂಬರಿ . ಆದರೆ ಜನ ಮನ್ನಣೆ ಗಳಿಸದಿರುವುದು ಬಹುಶಃ ಅಧ್ಯಾತ್ಮಿಕವಾಗಿ ಯೋಚಿಸದವರಾಗಿರುವುದೇ ಹೆಚ್ಚು ಕಾರಣ ಎನಿಸಿತು. ಖ್ಯಾತ ಬರಹಗಾರರಾದ ವೆಂಕಟೇಶ್ ಮಾಚಕನೂರ ಮುನ್ನುಡಿ ಇದೆ. ಹೆಣ ಅಸ್ಥಿಪಂಜರದ ಪ್ರಸ್ತಾಪವೇ ಕಾದಂಬರಿಯ ಮುಖ್ಯ ವಸ್ತುವಾಗುವುದು ಗಮನಾರ್ಹ.
’ಕ್ಷಿತಿಜ್ ಬೀದರ್’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುವ ಬಸವರಾಜ ಮಠಪತಿ ಅವರು ಜನಿಸಿದ್ದು 1954ರ ಜೂನ್ 1 ರಂದು. ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಬನ್ನಳ್ಳಿ ಎಂಬ ಗ್ರಾಮದಲ್ಲಿ. ತಂದೆ ನಾಗಯ್ಯ ಸ್ವಾಮಿ ಮಠಪತಿ, ತಾಯಿ ಶಾರದಾ ದೇವಿ. ಬಸವರಾಜ ಅವರ ಕುಟುಂಬವು 1957 ರಲ್ಲಿ ನಿರ್ಣಾ ಗ್ರಾಮಕ್ಕೆ ವಲಸೆ ಬಂದು ನೆಲೆಸಿತು. ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ನಿರ್ಣಾ ಗ್ರಾಮದಲ್ಲಿ ಮುಗಿಸಿ ಬಸವರಾಜ ಅವರು ಬಿ. ಎಸ್ಸಿ. ಪದವಿ (1974) ಯನ್ನು ಬೀದರನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ ಪಿ.ಜಿ.ಡಿ.ಎಸ್. (1979), ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ. ...
READ MORE