“ಒಂದು ಮೊಟ್ಟೆಯನ್ನು ಹೊರಗಿನಿಂದ ಒಡೆದರೆ ಒಂದು ಪ್ರಾಣ ಹೋಗುತ್ತದೆ. ಒಳಗಿನಿಂದ ಒಡೆದರೆ ಒಂದು ಜೀವಿ ಹೊರಗೆ ಬರುತ್ತದೆ. ಜ್ಞಾನ, ಗೆಲುವಿನ ಬಯಕೆ ಹೊರಗಿನಿಂದ ಬರುವುದಿಲ್ಲ. ಅವು ಒಳಗಿನಿಂದ ಬರಬೇಕಷ್ಟೇ” "ನಮ್ಮನ್ನು ಗುರಿಮುಟ್ಟಿಸುವ ಹಾದಿಗಾಗಿ ನಾವು ಎಷ್ಟೋ ದಿನಗಳು, ತಿಂಗಳು, ವರ್ಷಗಳು ಕಾಯುತ್ತೇವೆ. ಅಂತಹ ದಾರಿಗಳು ನಡೆಯುವ ಮೂಲಕ ಕಾಣುತ್ತದೆಯೇ ಹೊರತು, ಕಾಯುವುದರ ಮೂಲಕವಲ್ಲ" ಇಂತಹ ವಿಶಿಷ್ಟ ಸೂಕ್ತಿಗಳ ಮೂಲಕ ಓದುಗರನ್ನು ಸೆಳೆಯುತ್ತಲೇ ವ್ಯಕ್ತಿತ್ವ ವಿಕಸನಕ್ಕೆ ಕೊಂಡೊಯ್ಯುವ ವಿಶಿಷ್ಟ ಕಾದಂಬರಿ ‘ಹದ್ದಿನ ರೆಕ್ಕೆ ಸದ್ದು’. ಸಂಡೂರು ವೆಂಕಟೇಶ್ ಅವರು ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE