ಸಂಸಾರದ ಸಾರ

Author : ವಿವೇಕಾನಂದ ಕಾಮತ್

Pages 160

₹ 85.00




Year of Publication: 2002
Published by: ಸಾಗರ್ ಪ್ರಕಾಶನ
Address: ನಂ. 1679, 10ನೇ ಮುಖ್ಯರಸ್ತೆ, 5ನೇ ಏ ಅಡ್ಡರಸ್ತೆ, ಬನಶಂಕರಿ ಮೊದಲನೇ ಹಂತ, 2ನೇ ಘಟ್ಟ, ಬೆಂಗಳೂರು - 560050

Synopsys

ಎರಡು ಕಿರು ಕಾದಂಬರಿಗಳುಳ್ಳ ಹೊತ್ತಗೆ ಇದು. ಈ ಎರಡೂ ಕಾದಂಬರಿಗಳು ರಾಗಸಂಗಮ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಜನಪ್ರಿಯ ಮಾದರಿಯ ಎರಡು ಕಥೆಗಳು ಇಲ್ಲಿವೆ. ದಾಂಪತ್ಯದಲ್ಲಿ ಪ್ರೀತಿ, ನಂಬಿಕೆಗಿಂತಲೂ ಅಹಂಭಾವವೇ ಮುಖ್ಯ ಪಾತ್ರ ವಹಿಸಿದಾಗ ಸಂಸಾರದಲ್ಲಿ ಸಾರ ಉಳಿದೀತೇ..? ಈ ಹೊತ್ತಗೆಯಲ್ಲಿರುವ ಇನ್ನೊಂದು ಕಾದಂಬರಿ ನೆನಪಿನಂಗಳದಲ್ಲಿ ನೂರು ಚಿತ್ತಾರ. ಒಬ್ಬನನ್ನು ಪ್ರೀತಿಸಿ ಅವನ ಆಪ್ತ ಸ್ನೇಹಿತನನ್ನು ಮದುವೆಯಾಗಿ ಮೋಸ ಹೋದ ಬಗ್ಗೆ ಪ್ರಿಯಕರನನ್ನು, ಕೈ ಹಿಡಿದವನನ್ನು ದ್ವೇಷಿಸುತ್ತಾ ಬರುವ ನಾಯಕಿಯ ಮುಂದೆ ಸತ್ಯವೊಂದು ಅನಾವರಣಗೊಳ್ಳುತ್ತದೆ. ಅವಳ ಮರೆಯಲ್ಲಿ ನಡೆದ ಆ ಘಟನೆ ಏನು..?

About the Author

ವಿವೇಕಾನಂದ ಕಾಮತ್
(21 January 1976)

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...

READ MORE

Related Books