‘ಕ್ಯಾಥರೀನಾ ಏನಾದಳು’ ಹೈನ್ರಿಶ್ ಬ್ಯೋಲ್ ಅವರ ಜರ್ಮನ್ ಕಾದಂಬರಿಯನ್ನು ಪದ್ಮರಾಜ ದಂಡಾವತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಹೈನ್ರಿಶ್ ಬ್ಯೋಲ್ ರಚಿಸಿದ ಕಾದಂಬರಿಗಳಲ್ಲಿ ಅತ್ಯಂತ ಯಶಸ್ವಿಯಾದ ಈ ಕಾದಂಬರಿಯು ಅವನಿಗೆ ನೊಬೆಲ್ ಪ್ರಶಸ್ತಿ ದೊರಕಿದ ಎರಡು ವರ್ಷಗಳ ನಂತರ ಅಂದರೆ 1974ರಲ್ಲಿ ಪ್ರಕಟವಾಯಿತು. ಪೀತ ಪತ್ರಿಕೋದ್ಯಮವನ್ನು ಈ ಕೃತಿ ಅತ್ಯಂತ ಮೊನಚಾಗಿ ವಿಡಂಬಿಸುತ್ತದೆ ಎಂದಿದ್ದಾರೆ ಪ್ರೊ.ಸಿ.ಎನ್. ರಾಮಚಂದ್ರನ್. ಹಿರಿಯ ಪತ್ರಕರ್ತ, ಲೇಖಕ ಪದ್ಮರಾಜ ದಂಡಾವತಿ ಅವರು ಅತ್ಯಂತ ಸರಳವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದಲ್ಲಿ 1955ರ ಆಗಸ್ಟ್ 30 ರಂದು ಪದ್ಜರಾಜ ದಂಡಾವತಿ ಅವರು ಜನಿಸಿದರು. ತಂದೆ ದೇವೇಂದ್ರಪ್ಪ, ತಾಯಿ ಚಂಪಮ್ಮ. ಪ್ರಾಥಮಿಕ- ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಮುದ್ದೇಬಿಹಾಳದಲ್ಲಿ ಮುಗಿಸಿ, ಪದವಿ ಶಿಕ್ಷಣವನ್ನು ರಾಮದುರ್ಗದಲ್ಲಿ ಪೂರೈಸಿದರು. ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು. ಪತ್ರಕರ್ತರಾಗಿ 1982ರಲ್ಲಿ ಪ್ರಜಾವಾಣಿ ಸೇರಿದ್ದು, ಹಂತ ಹಂತವಾಗಿ ಬಡ್ತಿ ಹೊಂದಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ಸತತ ಎಂಟು ವರ್ಷಗಳಿಂದ ಅವರು ಪ್ರತಿ ಭಾನುವಾರ ಪ್ರಜಾವಾಣಿಯಲ್ಲಿ ಬರೆದ ‘ನಾಲ್ಕನೇ ಆಯಾಮ’ ಅಂಕಣ, ತನ್ನವಿಚಾರ-ವಿಷಯ ವೈವಿಧ್ಯತೆಯಿಂದಾಗಿ ಜನಪ್ರಿಯತೆ ಪಡೆದಿತ್ತು. ಕೃತಿಗಳು: ಪತ್ರಿಕಾಭಾಷೆ, ರಿಪೋರ್ಟಿಂಗ್, ಅವಲೋಕನ, ನಾಲ್ಕನೇ ಆಯಾಮ(ಆರು ...
READ MORE