ಹೂವು ಮುಳ್ಳು

Author : ವಿವೇಕಾನಂದ ಕಾಮತ್

Pages 144

₹ 70.00




Year of Publication: 2001
Published by: ದಶಮಿ ಪ್ರಕಾಶನ
Address: ಶ್ರೀ ಮಂಜುನಾಥ ನಿಲಯ, ಎನ್.ಟಿ. ಬಿ. ಆಫೀಸ್ ಪಕ್ಕ, ಜನ್ನಾಪುರ, ಭದ್ರಾವತಿ – 577301

Synopsys

ದಾಂಪತ್ಯ ಎನ್ನುವುದು ಒಂದು ಗಟ್ಟಿಯಾದ ನಂಬಿಕೆಯ ತಳಹದಿಯ ಮೇಲೆ ನಿಂತ ಬಂಧನ. ಅಲ್ಲಿ ಭರವಸೆಯೇ ಜೀವದ್ರವ. ಅದೇ ಇಲ್ಲವಾದರೆ ಆ ಸಂಬಧ ಒಡಕು ನಾವೆಯಾಗುತ್ತದೆ. ಈ ಹೂವು ಮುಳ್ಳು ಕಾದಂಬರಿಯಲ್ಲೂ ಅಂಥ ಒಂದು ಕಥೆ ಇದೆ. ಬದುಕಿನ ಬಗ್ಗೆ ಹೊಂಗನಸುಗಳನ್ನು ಕಾಣುತ್ತಾ ಗಂಡನ ಮನೆಗೆ ಕಾಲಿಡುವ ಹುಡುಗಿಗೆ ಅವನು ಅವಳನ್ನು ಸದಾ ಸಂಶಯದ ದ್ರಷ್ಟಿಯಿಂದ ನೋಡಿದರೆ ಹೇಗಾಗಬೇಡ..? ಅವಳ ಬದುಕಿನ ಮುಳ್ಳುಗಳು ಹೂವಾಗಿ ಬದಲಾಯಿತೇ..? ರಾಗಸಂಗಮ ಪತ್ರಿಕೆಯಲ್ಲಿ ಮಾಸದ ಕಾದಂಬರಿಯಾಗಿ ಪ್ರಕಟಿತ ಕಾದಂಬರಿ ಇದು.

About the Author

ವಿವೇಕಾನಂದ ಕಾಮತ್
(21 January 1976)

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...

READ MORE

Related Books