’ಕರ್ನಲ್‌ನಿಗೆ ಯಾರೂ ಬರೆಯುವುದೇ ಇಲ್ಲ’ ಇದು ಲೇಖಕ ಶ್ರೀನಿವಾಸ ವೈದ್ಯರ ಅನುವಾದಿತ ಕೃತಿ. ದಕ್ಷಿಣ ಅಮೆರಿಕದ ಸ್ಪ್ಯಾನಿಶ್ ಭಾಷೆಯ ಲೇಖಕ ಗಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ನ ಕಿರುಕಾದಂಬರಿ ‘ನೋ ಒನ್ ರೈಟ್ಸ್ ಟು ಕರ್ನಲ್’ ನ ಅನುವಾದವಾಗಿದೆ.
ಮನುಷ್ಯನಿಗೆ ಅನಿವಾರ್ಯವಾದ ಮತ್ತು ನಿರರ್ಥಕ ಎನಿಸುವ ಕಾಯುವಿಕೆಯ ಅಂಶ ಹಲವು ಸ್ತರಗಳಲ್ಲಿ ಈ ಕಾದಂಬರಿ ಪರಿಚಯಿಸುತ್ತದೆ. ಕರ್ನಲ್ ಮತ್ತು ಅವನ ಹೆಂಡತಿ, ಅವನ ಹುಂಜ, ಪೋಸ್ಟ್ ಮಾಸ್ತರ್, ಡಾಕ್ಟರ್ ಇವಿಷ್ಟೇ ಪಾತ್ರಗಳು ಈ ಕಾದಂಬರಿಯ ಮುಖ್ಯ ವಸ್ತುಗಳಾಗಿವೆ. ತೀರ ಸರಳ ಕಥೆ ಎನಿಸಿದರೂ ಈ ಕಿರುಕಾದಂಬರಿ ಇತಿಹಾಸದ ಹಲವು ಎಳೆಗಳನ್ನು ಬಿಡಿಸುತ್ತದೆ.
ಕೆಲವೇ ಪುಟಗಳಲ್ಲಿ ಬದುಕಿನ ದರ್ಶನವನ್ನು, ಅದರ ಆಳ, ವಿಸ್ತಾರ, ಸಂಕೀರ್ಣಯೊಂದಿಗೆ ಅತ್ಯಂತ ಖಚಿತ ಮಾತುಗಳಲ್ಲಿ ಪರಿಣಾಮಕಾರಿಯಾಗಿ ಈ ಕಾದಂಬರಿ ಚಿತ್ರಿಸುತ್ತದೆ.
ನಗೆಬರಹ, ಹಾಸ್ಯಪ್ರಧಾನ ಸಾಹಿತ್ಯ ಹಾಗೂ ಲಲಿತ ಪ್ರಬಂಧ ಮುಂತಾದ ಪ್ರಕಾರಗಳಿಂದ ಒಮ್ಮೆಲೆ ಗಂಭೀರ ಸಾಹಿತ್ಯದೆಡೆಗೆ ಜೀಕಿಕೊಂಡ ಶ್ರೀನಿವಾಸ ವೈದ್ಯರು ಹುಟ್ಟಿದ್ದು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ. ತಂದೆ ಬಿ.ಜಿ. ವೈದ್ಯ, ಸುಪ್ರಸಿದ್ಧ ವಕೀಲರು. ತಾಯಿ ಸ್ವಾತಂತ್ರ್ಯ ಹೋರಾಟಗಾರರ ಮನೆತನದಿಂದ ಬಂದ ಸುಂದರಾಬಾಯಿ. ಪ್ರಾರಂಭಿಕ ಶಿಕ್ಷಣದಿಂದ ಹಿಡಿದು ಎಂ.ಎ.ವರೆಗೂ ಧಾರವಾಡದಲ್ಲೇ ಶಿಕ್ಷಣ ಪೂರ್ಣ ಗೊಳಿಸಿದರು. 1959ರಲ್ಲಿ ಅರ್ಥಶಾಸ್ತ್ರ-ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದ ಅವರು ಬ್ಯಾಂಕಿಂಗ್ ಪರೀಕ್ಷೆಯಾದ ಸಿ.ಎ.ಐ.ಐ.ಬಿ ಮತ್ತು ಭಾರತೀಯ ವಿದ್ಯಾಭವನದಿಂದ ಪಡೆದ ಪತ್ರಿಕೋದ್ಯಮ ಡಿಪ್ಲೊಮಾವನ್ನು ಪೂರೈಸಿದರು. ಮನೆಯಲ್ಲಿದ್ದುದು ಸಾಹಿತ್ಯಕ, ಸಾಂಸ್ಕೃತಿಕ ವಾತಾವರಣ. ಬಿಡುವಿನ ವೇಳೆಯಲ್ಲೆಲ್ಲಾ ಕೈಯಲ್ಲೊಂದು ಕಾದಂಬರಿ ಹಿಡಿದು ...
READ MORE