'ಫಕೀರಾ’ ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕೃತಿಯಾಗಿದೆ. ಫಕೀರಾ ಎಂಬ ವ್ಯಕ್ತಿ ಮಾದಿಗರ ಜನಾಂಗದ ಆದರ್ಶ ಹೋರಾಟಗಾರನ ಅನ್ಯಾಯ, ಶೋಷಣೆಯ ವಿರುದ್ಧ, ಬ್ರಿಟಿಷ್ ರ ದಬ್ಬಾಳಿಕೆಯ ವಿರುದ್ಧ ಹೋರಾಟ ಮಾಡಿ ತನ್ನ ಪ್ರಾಣವನ್ನು ಬಲಿ ಕೊಟ್ಟ ವ್ಯಕ್ತಿಯ ರೋಮಾಂಚಕಾರಿ ಸಂಕಥನ ಇದಾಗಿದೆ .ಈ ಘಟನೆ ನಡೆದುದು ಬ್ರಿಟಿಷ್ ರ ಕ್ವೀನ್ ವಿಕ್ಟೋರಿಯಾ ಆಳಿದ ಕಾಲದಲ್ಲಿ ನಡೆದ ಘಟನೆ. ಈ ಕಾದಂಬರಿಯು ಕಾದಂಬರಿಕಾರರ ಹುಟ್ಟೂರಾದ ವಾಟೆಗಾವ್ ನಲ್ಲಿ ನಡೆದ ನಿಜ ಜೀವನದ ಕಥಾನಿರೂಪಣೆಯಾಗಿದೆ.
ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...
READ MORE