ಬದುಕಿನ ಬಗ್ಗೆ ಕಡೆಂಗೋಡ್ಲು ಶಂಕರಭಟ್ಟರು ಹೀಗೆ ಹೇಳಿದ್ದಾರೆ ‘ನದಿಯ ನೀರು ಹರಿದಂತೆ ಜೀವನದ ನದಿಯು ಹರಿಯುತ್ತದೆ. ಹೀಗೆ ಹರಿಯುವಾಗ ಏನೇನೋ ಅನುಭವಗಳನ್ನು ಹೊತ್ತು ತರುತ್ತದೆ. ಆಯ್ಕೆ ಮಾಡುವ ಸ್ವತಂತ್ರ ಯಾರಿಗೂ ಇಲ್ಲ. ಬದುಕನ್ನ ಇದ್ದದ್ದು ಇದ್ದಂತೆ ಸ್ವೀಕರಿಸುವುದು ಸಹಜಧರ್ಮ’ ‘ನಿಮಿತ್ತ ಮಾತ್ರ ಭವ ಸವ್ಯಸಾಚಿನ್’ ಎಂದು ಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ. ವಿಧಿ ಒಂದೊಂದು ಕೆಲಸವನ್ನು ಮಾಡಿಸಲು ಒಬ್ಬೊಬ್ಬರನ್ನು ಉಪಕರಣವಾಗಿ ಬಳಸಿಕೊಳ್ಳುತ್ತೆ. ಇಲ್ಲಿ ನಾವು, ನೀವು ಎಲ್ಲಾ ‘ಉಪಕರಣಗಳು’, ‘ಗಂಧರ್ವಗಿರಿ’ಯಲ್ಲಿ ಎಲ್ಲರೂ ದೇವನ ಕೈನ ಉಪಕರಣಗಳಾಗಿದ್ದಾರೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE