’ದಿ ವುಮನ್ ಇನ್ ದಿ ಡ್ಯೂನ್ಸ್ ’ಕಾದಂಬರಿಯ ಮೂಲ ಲೇಖಕ ಕೋಬೊ ಆಬೆ. ಇದನ್ನು ಕನ್ನಡಕ್ಕೆ ಡಾ. ವಿಜಯಾ ಸುಬ್ಬರಾಜ್ ತಂದಿದ್ದಾರೆ.
ಈ ಕಾದಂಬರಿಯ ನಾಯಕ ಜುಂಪಿನಿಕಿ ಟೋಕಿಯೋ ನಿವಾಸಿ. ವೃತ್ತಿಯಿಂದ ಅಧ್ಯಾಪಕನಾದರೂ, ಪ್ರವೃತ್ತಿಯಿಂದ ಕೀಟ ವಿಜ್ಞಾನಿ ಅಥವಾ ಕೀಟ ಶಾಸ್ತ್ರಜ್ಞ. ಇಂತಹ ಪರಿಚಯದಿಂದ ಮುಂದುವರೆಯುವ ಕಾದಂಬರಿಯ ಕತೆ ಬೇರೆಯೇ ಆಯಾಮ ಪಡೆಯುತ್ತದೆ.
ಅಪರಿಚಿತ ಹೆಣ್ಣು- ಗಂಡು , ಆಕಸ್ಮಿಕವಾಗಿ, ಪರಿಸ್ಥಿತಿಗಳ ಒತ್ತಡದಿಂದಾಗಿ, ಮರಳ ದಿಬ್ಬಗಳ ಪರಿಸರದಲ್ಲಿ ಪಾತಾಳದಾಳದ ಮರಳಿನ ಗುಂಡಿಯ ಮನೆಯಲ್ಲಿ ಒಟ್ಟಿಗೆ ಇರಬೇಕಾಗುತ್ತದೆ. ಮರಳಿನ ವೈವಿಧ್ಯಮಯ ಚಲನಶೀಲತೆಗೆ ತಮ್ಮನ್ನು ಹೊಂದಿಸಿಕೊಂಡು, ಅದರ ಸ್ವಭಾವಕ್ಕೆ ಹೊಂದಿಕೊಂಡು , ತಮ್ಮನ್ನು ಕಾಯ್ದುಕೊಂಡು ಬದುಕುವ ಕಥೆಯ ಚಿತ್ರಣ ಕುತೂಹಲ ಹುಟ್ಟಿಸುತ್ತದೆ.
©2024 Book Brahma Private Limited.