ಮರಾಠಿ ಸಾಹಿತ್ಯದಲ್ಲಿ ಅಗ್ರಪಂಕ್ತಿಯಲ್ಲಿ ಗುರುತಿಸಲ್ಪಡುವ ಲೇಖಕರಾದ ಡಾ. ಶರಣಕುಮಾರ್ ಲಿಂಬಾಳೆ ಅವರ ‘ಬಹುಜನ’ ಎಂಬ ಮರಾಠಿ ಕಾದಂಬರಿಯನ್ನು ಕನ್ನಡಕ್ಕೆ ಲೇಖಕಿಯಾದ ಪ್ರಮಿಳಾ ಮಾಧವ್ ಅವರು ಅದೇ ಹೆಸರಿನಲ್ಲಿ ಅನುವಾದಿಸಿದ್ದಾರೆ. ಹಿಂದುತ್ವವಾದದಲ್ಲಿ ಪರಿಪಕ್ವವಾಗಿರದ ಶಕ್ತಿಗಳು ಯಾವ ರೀತಿಯಲ್ಲಿ ಸಮಾಜದಲ್ಲಿ ಕಾರ್ಯ ನಿರ್ವಹಿಸುತ್ತಾ ಇದೆ ಎಂಬುದರ ಕುರಿತು ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಜನತಂತ್ರದ ಉಪಯೋಗವನ್ನು ಯಾವ ರೀತಿ ಮಾಡಬೇಕು ಎನ್ನುವುದರ ನಿದರ್ಶನವನ್ನು ಈ ಪುಸ್ತಕ ಓದುಗರಿಗೆ ನೀಡುತ್ತದೆ. ಸಂವೇದನಾಶೀಲತೆಯಿಂದ ಮತ್ತು ವಿವೇಕದಿಂದ ಜನತಂತ್ರದ ಉಪಯೋಗವನ್ನು ಮಾಡುವುದರ ಪೂರಕಾಂಶಗಳನ್ನು ಈ ಪುಸ್ತಕ ತೆರೆದಿಡುತ್ತದೆ. ರಾಜಕೀಯ ಚಿಂತನೆಗಳ ಕುರಿತು ಮತ್ತು ಅವುಗಳಿಂದ ಜನರಿಗಾಗುವ ಉಪಯೋಗಗಳ ಕುರಿತು ಈ ಕಾದಂಬರಿ ತನ್ನ ಆಶಯವನ್ನು ವ್ಯಕ್ತಪಡಿಸುತ್ತದೆ. ಹಿಂದೂಧರ್ಮದ ನೇತ್ರತ್ವವನ್ನು ವಹಿಸಿಕೊಂಡಿರುವ ಸಾಧು ಸನ್ಯಾಸಿಗಳಲ್ಲಿನ ಅಸಂಗತತೆ, ಅವರ ರಾಜಕೀಯ ಅಪರಿಪಕ್ವತತೆಯ ಕುರಿತು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಓಟ್ಟಿನಲ್ಲಿ ಓದುಗರಿಗೆ ಹಿಂದುತ್ವ ಮತ್ತು ಅದರ ಸ್ಥಿತಿಗತಿಗಳ ಕುರಿತಾಗಿ ಸಮಂಜಸವಾದ ವಿವರಣೇಯನ್ನು ನೀಡುವ ಪುಸ್ತಕ ಇದಾಗಿದೆ. ತಮ್ಮ ಅನುಭವಗಳನ್ನು ಕಾದಂಬರಿಯ ರೂಪದಲ್ಲಿ ಲೇಖಕರು ಸರಳವಾಗಿ ನಿರೂಪಿಸಿದ್ದಾರೆ.
ಪ್ರಮೀಳಾ ಮಾಧವ್ ಅವರು ಬೆಂಗಳೂರಿನ ಆಚಾರ್ಯ ವಾಣಿಜ್ಯ ಕಾಲೇಜಿನಲ್ಲಿ ಅಧ್ಯಾಪಕಿ. ಮೂಲತಃ ಕಾಸರಗೋಡಿನವರಾದ ಅವರು ಹೈಸ್ಕೂಲ್ ಶಿಕ್ಷಣವನ್ನು ಬಿಇಎಂ ಹೈಸ್ಕೂಲ್ ನಲ್ಲಿ ಹಾಗೂ ಕಾಲೇಜು ಶಿಕ್ಷಣವನ್ನು ಕಾಸರಗೋಡು ಸರ್ಕಾರಿ ಪದವಿ ಕಾಲೇಜಿನಲ್ಲಿ ಪಡೆದರು. ಅವರೀಗ ಬೆಂಗಳೂರು ನಿವಾಸಿ. ಮರಾಠಿಯಿಂದ ಕನ್ನಡಕ್ಕೆ ಅನುವಾದಿಸುತ್ತಾರೆ. ಶರಣಕುಮಾರ ಲಿಂಬಾಳೆ ಅವರ ’ಬಹುಜನ’, ’ಹಿಂದೂ-ಸವರ್ಣ-ದಲಿತ ಸಂಘರ್ಷ, ನರವಾನರ ಕೃತಿಗಳನ್ನು ಅನುವಾದಿಸಿ ಪ್ರಕಟಿಸಿದ್ದಾರೆ. ...
READ MORE