ಯಸುನಾರ ಕವಾಬಟ ಅವರ ಈ ಕೃತಿ 1968ರಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನವಾಗಿತ್ತು. ಜಪಾನಿಯ ಸರಳ ಭಾಷೆಯಿಂದ ದಟ್ಟವಾದ ಟೀ (ಚಹಾ) ಸಂಸ್ಕೃತಿಯನ್ನು ಎಳೆಎಳೆಯಾಗಿ ಇಲ್ಲಿ ಚಿತ್ರಿಸಿದ್ದಾರೆ ಕಾದಂಬರಿಕಾರರು.
ಜಪಾನಿನ ಚಹಾ ಸಂಸ್ಕೃತಿ ಲೋಕ ಪ್ರಸಿದ್ಧ.ಅದಕ್ಕೆಂದೇ ಚಹಾ ಕುಟೀರಗಳು ಇನ್ನೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಚಹಾ ಸೇವಿಸಲು ಇಂತಹುದೇ ಉಡುಪು ಧರಿಸಿರಬೇಕು, ಅತಿಥೇಯ ಚಹಾವನ್ನು ಹೇಗೆ ತಯಾರಿಸಿ ನೀಡಬೇಕು ಎನ್ನುವ ನಿರ್ದಿಷ್ಟತೆಗಳು ನಮ್ಮನ್ನು ಪುಳಕರನ್ನಾಗಿಸುತ್ತದೆ.
ಚಹಾ ತಯಾರಿಕೆ ಒಂದು ಆಚರಣೆಯ ಹಿನ್ನೆಲೆಯಲ್ಲಿ ಕಥೆ ಬಿಚ್ಚಿಕೊಳ್ಳುತ್ತದೆ. ಕಥಾ ನಾಯಕ 'ಕಿಕುಜಿ' ತನ್ನ ಅಪ್ಪನ ಪ್ರೇಯಸಿಯಾಗಿದ್ದ 'ಚಿಕಕೋ' ನಡೆಸುವ ಸಂಭಾಷಣೆಗಳು ಆತ್ಮೀಯತೆಯ ಹದದಲ್ಲಿ ನಮ್ಮನ್ನು ಕರಗಿಸುತ್ತದೆ. ಪ್ರೀತಿಯ ಹಂಬಲ, ಹಕ್ಕುಸ್ಥಾಪನೆ, ಪರಂಪರೆ, ಅಸೂಯೆ ಎಲ್ಲವನ್ನೂ ಚಹಾ ಸಂಸ್ಕೃತಿಯ ಹಿನ್ನೆಲೆಯಲ್ಲಿ ಸರಳವಾಗಿ ಕಾಡುವ ಈ ಕೃತಿಯನ್ನು ಟಿ. ಎನ್. ಕೃಷ್ಣರಾಜು ಅವರು ಭಾವಕ್ಕೆ ಧಕ್ಕೆಯಾಗದಂತೆ ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.