‘ವೆನಿಸ್ಸಿನಲ್ಲಿ ಸಾವು’ ಜರ್ಮನಿಯ ಕಾದಂಬರಿಕಾರ ಥಾಮಸ್ ಮಾನ್ ಅವರ ಕಾದಂಬರಿಯನ್ನು ಲೇಖಕ ಎಸ್. ದಿವಾಕರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಒಂದು ಹಂತದಲ್ಲಿ ಗುಸ್ತಾವ್ ಆಶೆನ್ ಬಾಖ್ ಎಂಬ ಪ್ರಸಿದ್ಧ ಲೇಖಕನೊಬ್ಬನಿಗೆ ಉಂಟಾಗುವ ಕೆಲವು ಅನುಭವಗಳನ್ನು ಈ ಕಾದಂಬರಿ ನಿರೂಪಿಸುತ್ತದೆ.
ವೆನಿಸ್ ನಗರಕ್ಕೆ ಹೋಗುವುದೂ ಅಲ್ಲಿ ತಾದ್ಜಿಯೊ ಎಂಬ ಬಾಲಕನ ಸೌಂದರ್ಯವನ್ನು ಕಂಡು ಮರುಳಾಗುವುದು ಮೇಲುನೋಟಕ್ಕೆ ಭ್ರಾಮಕ ಘಟನೆಗಳಂತೆ ತೋರಬಹುದು, ಆದರೆ ಈ ಕಾದಂಬರಿಯ ಲೇಖಕ ಇವುಗಳ ಮೂಲಕವೇ ಎಲ್ಲ ಕಲೆಗಳಲ್ಲಿ- ಆದ್ದರಿಂದಲೇ ಎಲ್ಲ ಮಾನವ ಅನುಭವಗಳಲ್ಲಿ- ಒಂದು ಬಗೆಯ ದ್ವಂದ್ವವಿದೆ ಎಂದು ಸೂಜಿಸುತ್ತಾನೆ. ಈ ಸೂಕ್ಷ್ಮ ಎಳೆಯನ್ನು ಕಥಾವಸ್ತುವಾಗಿಸಿಕೊಂಡಿರುವ ಕಾದಂಬರಿ , ವ್ಯಕ್ತಿಯ ಸುತ್ತ ಶತಶತಮಾನಗಳಿಂದ ಬೆಳೆದು ಬಂದಿರುವ ನಾಗರಿಕತೆ, ಸಂಸ್ಕೃತಿ ಮತ್ತು ವೈಚಾರಿಕ ಪರಂಪರೆಯ ಬಗೆಗೂ ವಿಶೇಷ ಒಲವಿದ್ದ, ಅಸಾಧಾರಣ ಸಂವೇದನೆಯಿಂದ ಜೀವನವನ್ನು ಚಿತ್ರಿಸುತ್ತಲೇ ಅದಕ್ಕೊಂದು ವಿಮರ್ಶೆಯ ಎಳೆಯನ್ನೂ ಸೇರಿಸಿದ್ದಾನೆ.
ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು. ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು. ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ ...
READ MORE