ತಮಿಳು ಕಾದಂಬರಿ ಕ್ಷೇತ್ರದಲ್ಲಿ ಹೊಸ ನಿರೂಪಣಾ ತಂತ್ರದ ಮೂಲಕ ಹೆಸರಾಗಿರುವ ಸುಂದರ ರಾಮಸ್ವಾಮಿಯವರ ಈ ಕಾದಂಬರಿಯನ್ನು ಕೆ, ನಲ್ಲತಂಬಿ ಕನ್ನಡಕ್ಕಿಳಿಸಿದ್ದಾರೆ. ಒಂದು ಮರದೊಳಗಿನ ಆತ್ಮವನ್ನು, ಉಸಿರಾಟವನ್ನು, ಅದರ ಘನತೆಯನ್ನು ಆಲಿಸಿ ಬರದಂತಿದೆ ಈ ಕಾದಂಬರಿ, ಮನುಷ್ಯನ ರಾಜಕೀಯ ಪೈಪೋಟಿ, ಹಗೆತನ, ಕುತಂತ್ರಗಳ ತಿಕ್ಕಾಟದಲ್ಲಿ ಹೇಗೆ ಒಂದು ಮರ ಇಲ್ಲವಾಗುತ್ತದೆ ಎಂದು ಹೇಳುವ ಮೂಲಕ, ಆಧುನಿಕ ಅಭಿವೃದ್ಧಿ ರಾಜಕಾರಣವನ್ನು ಸರಳ ತಂತ್ರದ ಮೂಲಕ ಚರ್ಚಿಸುತ್ತಾರೆ. ಅಂತಿಮವಾಗಿ ಒಂದು ಮರವನ್ನು ಸಾಯಿಸುವ ಮೂಲಕ ಒಂದು ಸಮಾಜ ತನಗೆ ತಾನೇ ಸಾಯುತ್ತಾ ಹೋಗುತ್ತದೆ. ಕತೆಯ ಹೆಗ್ಗಳಿಕೆಯೇ ಸರಳ ನಿರೂಪಣೆ, ಮುಗ್ಧ, ಸಹಜ ಮನುಷ್ಯ ಭಾಷೆಯಲ್ಲಿ ಒಂದು ಮರದ ಹಿನ್ನೆಲೆ ಮುನ್ನೆಲೆಗಳನ್ನು ಕಟ್ಟಿಕೊಡುತ್ತಾ ಅದನ್ನು ಸುತ್ತುವರಿದಿರುವ ಊರು, ನಗರ ಜನರ ಕತೆಗಳನ್ನು ಕಾದಂಬರಿಕಾರ ಹೇಳುತ್ತಾನ. ಕಥನ ತಂತ್ರ ಅತ್ಯಂತ ಹೃದಯ ಸ್ಪರ್ಶಿಯಾದುದು ಮಾತ್ರವಲ್ಲ, ಕಾದಂಬರಿ ಓದುತ್ತಾ ಹೋದ ಹಾಗೆ ಹುಣಿಸೆಮರ ನಮ್ಮ ಭಾವ ಪ್ರಪಂಚದಲ್ಲಿ ಉದ್ದಗಲಕ್ಕೆ ಬೆಳೆಯುತ್ತಾ ಹೋಗುತ್ತದೆ.
ಮನೆ ಭಾಷೆ ತಮಿಳಾಗಿದ್ದರೂ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ತಮ್ಮದೇ ಅಸ್ತಿತ್ವ ಕಂಡುಕೊಂಡಿರುವ ಲೇಖಕ ಕೆ. ನಲ್ಲತಂಬಿ ತಮಿಳು ಮತ್ತು ಕನ್ನಡ ಸಾಹಿತ್ಯಕ್ಕೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡದಿಂದ ತಮಿಳಿಗೆ, ತಮಿಳಿನಿಂದ ಕನ್ನಡಕ್ಕೆ ಹಲವಾರು ವಿಶಿಷ್ಟ ಕಾದಂಬರಿಗಳನ್ನು ಅನುವಾದಿಸಿದ್ದಾರೆ. ‘ಅರ್ಧನಾರೀಶ್ವರ’, ‘ಹುಣಿಸೆಮರದ ಕಥೆ’, ‘ಹಳ್ಳ ಬಂತು ಹಳ್ಳ’, ಗುಡಿಗಂಟೆ ಮತ್ತು ಇತರ ಕಥೆಗಳು, ಬಾಪೂ ಹೆಜ್ಜೆಗಳಲ್ಲಿ, ಮತ್ತೊಂದು ರಾತ್ರಿ, ಅತ್ತರ್, ಸರಸವಾಣಿಯ ಗಿಣಿಗಳು, ಕೋಶಿ’ಸ್ ಕವಿತೆಗಳು, ಹತ್ತು ತಮಿಳು ಕತೆಗಳು, ಗೂಳಿ, ಹೂ ಕೊಂಡ, ಪೊನಾಚ್ಚಿ, ಅವರ ಅತ್ಯಂತ ಗಮನಾರ್ಹ ಕೃತಿಗಳು. ...
READ MORE