ಒಲವೇ ಜೀವನ

Author : ವಿವೇಕಾನಂದ ಕಾಮತ್

Pages 240

₹ 120.00




Year of Publication: 2010
Published by: ವ್ಯಾಸ ಪಬ್ಲಿಕೇಷನ್ಸ್
Address: ನಂ, 373 , 9ನೇ ಮುಕ್ಯರಸ್ತೆ ( ಪೈಪ್ ಲೈನ್) ಹನುಮಂತನಗರ, ಬೆಂಗಳೂರು - 560019
Phone: 96200 84380

Synopsys

ಪ್ರತಿಯೊಬ್ಬ ಹೆಣ್ಣು ತಾನು ಕೈ ಹಿಡಿವ ಗಂಡಿನ ಬಗ್ಗೆ, ಗಂದನ ಮನೆಯಲ್ಲಿ ಆರಂಭಿಸುವ ಹೊಸ ಜೀವನದ ಬಗ್ಗೆ ತನ್ನದೇ ಕಲ್ಪನೆಗಳನ್ನು ಹೆಣೆದಿರುತ್ತಾಳೆ. ತನಗೆ ಸಂಪೂರ್ಣವಾಗಿ ಅಪರಿಚಿತವಾಗಿರುವ ವಾತಾವರಣಕ್ಕೆ ಹೊಂದಿಕೊಳ್ಳಲು, ಆ ಮನೆ ಮಂದಿಯ ಪ್ರೀತಿ ವಿಶ್ವಾಸ ಗಳಿಸಲು ತನ್ನ ಎಷ್ಟೋ ಆಸೆ ಆ ಆಕಾಂಕ್ಷೆಗಳನ್ನು ಬಲಿಕೊಡಬೇಕಾಗುತ್ತದೆ. ಆ ಗಂಡಿನ ಮನೆ ಮಂದಿಯ ಭಾವನೆಗಳು, ಸ್ವಭಾವ- ಗುಣ ನಡತೆಯ ವೈರುಧ್ಯದ ನಡುವೆಯೂ ತನ್ನ ತಾಳ್ಮೆಯಿಂದ ಸಹನೆ ಸಂಯಮಗಳಿಂದ ಅವರೆಲ್ಲರ ಮನ ಗೆಲ್ಲುವ ಹೆಣ್ಣಿನ ಪಾತ್ರ ಈ ಕಾದಂಬರಿಯಲ್ಲಿದೆ. ಕನ್ನಡಪ್ರಭ ದೈನಿಕ ಧಾರವಾಹಿಯಗಿ ಪ್ರಕಟಗೊಂಡ ದ್ವಿತಿಯ ಮುದ್ರಣ ಕಾಣುತ್ತಿರುವ ಕಾದಂಬರಿ ಇದು.

About the Author

ವಿವೇಕಾನಂದ ಕಾಮತ್
(21 January 1976)

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...

READ MORE

Related Books