ಲೇರಿಯೊಂಕ ಕಾಡಿನ ಹುಡುಗನ ಓದಿನ ಹಾದಿ

Author : ಪ್ರಶಾಂತ್ ಬೀಚಿ

₹ 130.00




Published by: ಛಂದ ಪುಸ್ತಕ
Address: ಬೆಂಗಳೂರು

Synopsys

`ಲೇರಿಯೊಂಕ ಕಾಡಿನ ಹುಡುಗನ ಓದಿನ ಹಾದಿ’ ಕೃತಿಯು ಮೂಲತಃ ಕೀನ್ಯಾದ ಹೆಸರಾಂತ ಕಾದಂಬರಿಕಾರ ಹೆನ್ರಿ. ಆರ್. ಓಲೆ ಕುಲೆಟ್ ಅವರ ಕಾದಂಬರಿಯಾಗಿದೆ. ಪ್ರಶಾಂತ್ ಬೀಚಿ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಆಫ್ರಿಕಾದ ಬುಡಕಟ್ಟುಗಳಲ್ಲಿ ಒಂದಾದ ಮಾಸಯಿ ಬುಡಕಟ್ಟಿನ ಬಾಲಕನೊಬ್ಬ ಶಾಲಾ ಶಿಕ್ಷಣ ಪಡೆಯಲು ನಗರಕ್ಕೆ ಹೋಗುವ ಮತ್ತು ನಗರದಲ್ಲಿ ಕೆಲವು ವರ್ಷ ಪಡೆಯುವ ಅನುಭವಗಳನ್ನು ಈ ಕಾದಂಬರಿ ಒಳಗೊಂಡಿದೆ.

About the Author

ಪ್ರಶಾಂತ್ ಬೀಚಿ

ಲೇಖಕ ಪ್ರಶಾಂತ್ ಬೀಚಿ ಅವರ ಪೂರ್ಣ ಹೆಸರು- ಪ್ರಶಾಂತ ಬೀರೂರು ಚಿಕ್ಕಣ್ಣ. ಮೂಲತಃ  ಚಿಕ್ಕಮಗಳೂರು ಜಿಲ್ಲೆಯ ಬೀರೂರಿನವರು. ಬೀರೂರು, ಬೆಂಗಳೂರು ಮತ್ತು ಶಿವಮೊಗ್ಗ ದಲ್ಲಿ ವಿದ್ಯಾಭ್ಯಾಸ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ಸ್ ನಲ್ಲಿ ಡಿಪ್ಲೊಮಾ ಪದವೀಧರರು. ಬೆಂಗಳೂರು, ತಾನ್ಜಾನಿಯಾ (ಪೂರ್ವ ಆಪ್ರಿಕಾ), ಯೂಕೆ ಯಲ್ಲಿ ಕಾರ್ಯ ನಿರ್ವಹಿಸಿ ಸದ್ಯಕ್ಕೆ ಕೆನಡಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಬರೆದ ಲೇಖನಗಳು, ಕಥೆ-ಕವನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಹಾಗೂ ಅಂತಾರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಕೃತಿಗಳು: ಲೇರಿಯೊಂಕ (ಅನುವಾದಿತ ಕಾದಂಬರಿ),  ಈ ಕೃತಿಗೆ ವಸುಧೇವ ಭೂಪಾಲಂ, ಪರಮೇಶ್ವರ ಭಟ್ಟ ಹಾಗು ಬೇಂದ್ರೆ ಪ್ರಶಸ್ತಿ ಲಭಿಸಿದೆ. ಕಿಲಿಮಂಜಾರೋ, ತಾಜಾ ತಾನ್ಜಾನಿಯಾ ಎಂಬ ಅಡಿ ಬರಹದೊಂದಿಗಿರುವ ಈ ...

READ MORE

Related Books