ಪುರುಷೋತ್ತಮ

Author : ಯಶವಂತ ಚಿತ್ತಾಲ

Pages 592

₹ 345.00




Year of Publication: 2014
Published by: ರಾಜಮಾರ್ಗ ಸಾಹಿತ್ಯ ಸಂಸ್ಕೃತಿ

Synopsys

ಯಶವಂತ ಚಿತ್ತಾಲರ ಬೃಹತ್ ಕಾದಂಬರಿ ’ಪುರುಷೋತ್ತಮ’. ಭಾರತೀಯ ಭಾಷಾ ಪರಿಷತ್‌ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಗಳಿಸಿರುವ ಮಹತ್ವದ ಕಾದಂಬರಿ.

ಯಶವಂತ ಚಿತ್ತಾಲರ ಈ ಬೃಹತ್ ಕೃತಿ ಕನ್ನಡ ಕಾದಂಬರಿಯ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲು. ಇಂದು, ಜೀವನ ಹಾಗೂ ಸಾಹಿತ್ಯಗಳೆರಡನೂ ದಿಕ್ಕು ತಪ್ಪಿಸುತ್ತಿರುವ ನಿಷ್ಟುರ ಸಮಸ್ಯೆಗಳನ್ನು ಕುರಿತ ಸೃಜನಶೀಲ ಧ್ಯಾನದ ಫಲವಾದ 'ಪುರುಷೋತ್ತಮ', ಕಾದಂಬರಿ ಪ್ರಕಾರದ ಕ್ಲಿತಿಜಗಳನ್ನು ವಿಸ್ತರಿಸುವ ಚೇತೋಹಾರಿ ಪ್ರಯತ್ನವಾಗಿದೆ.

ಈ ಮಹಾ ಕಾದಂಬರಿಯು ಸ್ಕೂಲವಾಗಿ ಎರಡು ಕಥಾವಸ್ತುಗಳನ್ನು ಒಳಗೊಂಡಿದೆ. ಹನೇಹಳ್ಳಿಯ ಕುಟುಂಬವೊಂದರ ದಾಯಾದಿ ಮತ್ಸರ ಹಾಗೂ ಷಡ್ಯಂತ್ರಗಳ ಕಾರಣದಿಂದುಂಟಾಗುವ ಅಪಾರ ಹಿಂಸೆ ಮತ್ತು ಜೀವಹಾನಿ. ನಾಲ್ಕು ತಲೆಮಾರು ಹಾಗೂ ಮುಕ್ಕಾಲು ಶತಮಾನ ಕಾಲದ ಘಟನೆಗಳಿರುವ ಮೊದಲ ಭಾಗದಲ್ಲಿ ಹನೇಹಳ್ಳಿಯ ಕೌಟುಂಬಿಕ ಕಲಹ ಮುಖ್ಯ. ಎರಡನೆಯ ಭಾಗದಲ್ಲಿ ಮುಂಬಯಿಯ ಮನೆ ಪ್ರಾಮುಖ್ಯತೆ ಪಡೆಯುತ್ತದೆ.

ಪುರುಷೋತ್ತಮ, ಮಂಜುನಾಥ, ಸೀತೆ - ಈ ಪಾತ್ರಗಳ ಮೂಲಕ ಈ ಎರಡೂ ವಿಭಿನ್ನ ಕಥಾವಸ್ತುಗಳನ್ನು (ವ್ಯಕ್ತಿನಿಷ್ಟ ಹಾಗೂ ಸಮಷ್ಟಿನಿಷ್ಟ ಆಯಾಮ) ಈ ಕೃತಿಯು ಒಂದೆಡೆ ತರುತ್ತದೆ. ಎರಡರಲ್ಲಿಯೂ ಕೇಂದ್ರಸ್ಥಾನದಲ್ಲಿ ಪುರುಷೋತ್ತಮನು 'ಮಾಗುವುದರ ಪ್ರಕ್ರಿಯೆ’ಯನ್ನು ಹಂತ ಹಂತವಾಗಿ ಚಿತ್ರಿಸುತ್ತದೆ. ಮುಂಬಯಿಯಲ್ಲಿರುವ ಮಧ್ಯವಯಸ್ಕ ಪುರುಷೋತ್ತಮನು ತನ್ನ ಪೂರ್ವಜರ ಹನೇಹಳಿಗೆ ಎರಡನೆಯ ಬಾರಿ ಬರುವುದರಿಂದ ಪ್ರಾರಂಭವಾಗುವ ಕೃತಿ ಹನೇಹಳ್ಳಿಯ ಹಾಗೂ ಭೂತ-ವರ್ತಮಾನ-ಭವಿಷ್ಯತ್ ಇವುಗಳ ನಡುವೆ ಒಂದರಿಂದ ಮತ್ತು ಸರಾಗವಾಗಿ ಜಿಗಿಯುತ್ತಾ ಮುಂದುವರಿಯುತ್ತದೆ. ನೆನಪುಗಳ ಸುರುಳಿಗಳನ್ನು ಬಿಡಿಸುವುದರ ಮುಖಾಂತರ ಬೆಳೆಯುತ್ತದೆ.

ಕಾದಂಬರಿಯನ್ನು ಕುರಿತು ವಿಮರ್ಶಕ ಸಿ.ಎನ್‌. ರಾಮಚಂದ್ರನ್ ಅವರು ’ಸಾಧಾರಣ ಪುರುಷನೊಬ್ಬ ತನ್ನನ್ನು ಆವರಿಸಿರುವ ಭೂತದ ಹುತ್ತವನ್ನೊಡೆದು ಹೊರಬಂದು, ತನ್ನೆಲ್ಲಾ ಸಾಧ್ಯತೆಗಳನ್ನೂ ಗುರುತಿಸಿಕೊಂಡು 'ಬದುಕು ಇರುವುದು ಅರ್ಥೈಸುವುದಕ್ಕಲ್ಲ- ಬದುಕುವುದಕ್ಕೆ’ ಎಂಬ ಅರಿವಿನೊಂದಿಗೆ 'ಪುರುಷೋತ್ತಮ'ನಾಗುವ ಪ್ರಕ್ರಿಯೆಯನ್ನು ಈ ಕಾದಂಬರಿ ದಟ್ಟ ಹಾಗೂ ಸಾಚಾ ವಿವರಗಳೊಂದಿಗೆ ದಾಖಲಿಸುತ್ತದೆ. ಇಲ್ಲಿ ಒತ್ತು ಬೀಳುವುದು ’ಆಗುವಿಕೆಗೆ' ಮತ್ತು 'ಆಗುವ’ ಪ್ರಕ್ರಿಯೆಯಲ್ಲಿ ಅನಿವಾರ್ಯವಾಗಿರುವ ತೊಳಲಾಟ, ನೋವು ಇವುಗಳಿಗೆ’ ಎಂದು ವಿವರಿಸುತ್ತಾರೆ.

’ಕೃತಿ ಅರಗಿಸಿಕೊಂಡಿರುವ ಗಾಢ ವೈಚಾರಿಕತೆಯ ಮುಖ್ಯ ಎಳೆಯೆಂದರೆ ಬದುಕನ್ನು ಕುರಿತು ಕೃತಿ ಮಂಡಿಸುವ, ಮೂಡಿಸುವ ಅರಿವು. ಅಖಂಡವಾಗಿರುವ ಬದುಕಿಗೆ ಯಾವುದೇ ಖಚಿತ ರೂಪವಿಲ್ಲ. ಲೌಕಿಕ ಬಂಧವಿಲ್ಲ. ಆದರೆ ನಾವು, ನಮ್ಮ ಅನುಕೂಲಕ್ಕಾಗಿ ಬದುಕಿಗೆ ಕಾಲದೇಶಗಳನ್ನು ನಿರ್ದೇಶಿಸಿ ಅದಕ್ಕೊಂದು ಬದುಕನ್ನು ಅರ್ಥೈಸಲು ತೊಡಗುತ್ತೇವೆ. ’ಗಡಿಗಳೇ ಕಾಣದ ಅಪಾರ ಜಲರಾಶಿಯಂತಿರುವ ಕಾಲ-ಅವಕಾಶಗಳ’ ಬದುಕಿನಲ್ಲಿ ನಾವು ಮತ್ತೆ ಮತ್ತೆ ’ಕಾರಣ ಪರಂಪರೆ'ಯನ್ನು ಆರಿಸುತ್ತೇವೆ’ ಎಂದು ಅವರು ವಿವರಿಸುತ್ತಾರೆ.

About the Author

ಯಶವಂತ ಚಿತ್ತಾಲ
(03 August 1928 - 22 March 2014)

ತಮ್ಮ ಸಣ್ಣಕತೆಗಳ ಮೂಲಕ ಆಧುನಿಕ ಕನ್ನಡ ಕಥಾಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು ಯಶವಂತ ಚಿತ್ತಾಲ.  ಅವರೊಬ್ಬ ಮಹತ್ವದ ಲೇಖಕ. ನವ್ಯ ಸಾಹಿತ್ಯದ ಪ್ರಮುಖ ಕತೆಗಾರ ಚಿತ್ತಾಲರು ಕತೆ ಹೇಳುವುದರಲ್ಲಿ ಸಿದ್ಧಹಸ್ತರು. ಕತೆಗಳ ಮೂಲಕ ಬರವಣಿಗೆ ಆರಂಭಿಸಿದ ಯಶವಂತರ ಮೊದಲ ಕತೆ 'ಬೊಮ್ಮಿಯ ಹುಲ್ಲು ಹೊರೆ'. ಅವರ ಮೊದಲ ಕತೆಯನ್ನು ಕನ್ನಡದ ಮಹತ್ವದ ಕತೆಗಳಲ್ಲಿ ಒಂದು ಗುರುತಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹನೇಹಳ್ಳಿಯವರಾದ ಯಶವಂತ ಅವರು 1928ರ ಆಗಸ್ಟ್ 3ರಂದು ಜನಿಸಿದರು. ತಂದೆ ವಿಠೋಬ, ತಾಯಿ ರುಕ್ಕಿಣಿ. ಖ್ಯಾತ ಕವಿ ಗಂಗಾಧರ ಚಿತ್ತಾಲರು ಅವರ ಹಿರಿಯ ಸಹೋದರ. ಹನೇಹಳ್ಳಿ, ಕುಮಟೆ, ಧಾರವಾಡ, ಮುಂಬಯಿಗಳಲ್ಲಿ ...

READ MORE

Related Books