ಖ್ಯಾತ ಕಾದಂಬರಿಕಾರ ಚಿನುವ ಅಚಿಬೆ ಅವರ ಥಿಂಗ್ಸ್ ಫಾಲ್ ಅಪಾರ್ಟ್ ಕಾದಂಬರಿಯನ್ನು ಲೇಖಕ ಪ್ರಮೋದ ಮುತಾಲಿಕ ಅವರು ‘ಕಳಚಿದ ಕೊಂಡಿ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಚಿನುವ ಅಚಿಬೆ ಅವರು ಮೂಲತಃ ನೈಜಿರಿಯನ್ ಪ್ರಜೆ. 1958 ರಲ್ಲಿ ನೈಜಿರಿಯಾದಲ್ಲಿ ಹಾಗೂ 1962ರಲ್ಲಿ ಬ್ರಿಟನ್ ನಲ್ಲಿ ಮೊದಲ ಬಾರಿಗೆ ಈ ಕಾದಂಬರಿ ಪ್ರಕಟಗೊಂಡಿತ್ತು. ವಸಾಹತೋತ್ತರ ಕಾಲದ ಸ್ಥಿತಿಗತಿಗಳ ಚಿತ್ರಣವನ್ನು ಈ ಕಾದಂಬರಿ ನೀಡುತ್ತದೆ.
ಲೇಖಕ, ಅನುವಾದಕ ಪ್ರಮೋದ ಮುತಾಲಿಕ ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ 37 ವರ್ಷ ಇಂಗ್ಲಿಷ್ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇಂಗ್ಲಿಷ್, ಕನ್ನಡ ಭಾಷೆಗಳಲ್ಲಿ ಪ್ರಭುತ್ವ ಹೊಂದಿರುವ ಇವರು ಅನುವಾದ ಮತ್ತು ವಿಮರ್ಶೆಯಲ್ಲಿ ಸಾಕಷ್ಟು ಕೃಷಿ ಮಾಡಿದ್ದಾರೆ. ಜಗತ್ತಿನ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ಮತ್ತು ಕನ್ನಡದ ಶ್ರೇಷ್ಠ ಕೃತಿಗಳನ್ನು ಇಂಗ್ಲೀಷಗೆ ಅನುವಾದಿಸಿದ್ದಾರೆ. ಚಿನುವ ಅಚಿಬೆ ಯ Things Fall Apart, ಆರ್. ಕೆ. ನಾರಾಯಣರ The Guide, ಸ್ಕಾಟ್ ಫಿಜರಾಲ್ಡ್ ರ Great Gatsby ಕಾದಂಬರಿಗಳನ್ನು ಕನ್ನಡಕ್ಕೆ ...
READ MORE