ಇನ್ಯಾತ್ಸಿಯೊ ಸಿಲೋನೆ ಎಂಬ ಇಟಲಿಯ ಪ್ರಖ್ಯಾತ ಲೇಖಕ ಬರೆದ ಕೃತಿ ಇದು. ಫ್ಯಾಸಿಸ್ಟ್ ಶಕ್ತಿಗಳು ಇಟಲಿಯಲ್ಲಿ ಅಧಿಕಾರಕ್ಕೆ ಬಂದಾಗ ಅದರ ಪಾಶವೀ ಶಕ್ತಿ ವಿರುದ್ಧ ಸೆಟೆದು ನಿಂತು, ಸೋತರೂ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡ ಕಾಲ್ಪನಿಕ ಹಳ್ಳಿಯೊಂದರ ಕುರಿತು ಕಾದಂಬರಿ ವಿವರಿಸುತ್ತದೆ. ಅವಮಾನದ ಮುಂದೆ, ಅನ್ಯಾಯದ ಮುಂದೆ ನಾವು ತಲೆತಗ್ಗಿಸಬಾರದು ಎಂಬುದು ಕೃತಿಕಾರ ಸಿಲೋನೆಯವರ ವಾದ. ಕು. ಶಿ. ಹರಿದಾಸ ಭಟ್ಟರು ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ.
ಲೇಖಕ ಕು.ಶಿ. ಹರಿದಾಸ ಭಟ್ಟರು ಮೂಲತಃ ಉಡುಪಿಯವರು. ಇವರು ಜನಿಸಿದ್ದು 1924 ಮಾರ್ಚ್ 17ರಂದು. ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಉಡುಪಿಯ ಎಂಜಿಎಂ (ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. ಇಂಗ್ಲೆಂಡ್, ಅಮೆರಿಕಾ, ರಷ್ಯಾ ಮುಂತಾದ ರಾಷ್ಟ್ರಗಳಿಗೆ ಭೇಟಿ ನೀಡಿದ್ದ ಇವರು ಮೂರು ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಘಂಟಮಾರಾ, ಅವ್ಯಕ್ತಮಾನವ, ನಡುಹಗಲಿನ ಕಗ್ಗತ್ತಲೆ, ಲೋಕಾಭಿರಾಮ(ಮೂರು ಸಂಪುಟಗಳು) ಇತಾಲಿಯ ನಾನು ಕಂಡಂತೆ. ಜಗದಗಲ, ಒಮ್ಮೆ ರಶಿಯಾ ಇನ್ನೊಮ್ಮೆ ಇತಾಲಿಯ. ರಂಗಾಯಣ ಇವರ ಪ್ರಮುಖ ಕೃತಿಗಳು. ಇವರಿಗೆ ...
READ MORE