ಭಾಲಚಂದ್ರ ಘಾಣೀಕರ್
(03 November 1910 - 08 October 2004)
ಲೇಖಕ ಭಾಲಚಂದ್ರಘಾಣೀಕರ್ ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಮಿಶ್ರೀಕೋಟೆಯಲ್ಲಿ. ತಂದೆ-ವೆಂಕಟರಾಯರು, ತಾಯಿ-ಲಕ್ಷ್ಮೀಬಾಯಿ.ವೆಂಕಟರಾಯರು ರಾಷ್ಟ್ರೀಯ ಶಾಲೆಯನ್ನು ತೆರೆದರು. ಅದೇ ಶಾಲೆಯಲ್ಲಿ ಭಾಲಚಂದ್ರ ಮತ್ತು ಇವರ ತಮ್ಮನ ವಿದ್ಯಾಭ್ಯಾಸ ಪ್ರಾರಂಭವಾಯಿತು. ಆದರೆ ಸರಕಾರದಿಂದ ನೆರವು ದೊರೆಯದೆ ಶಾಲೆ ನಿಂತು ಹೋಯಿತು. ನಂತರ ಭಾಲಚಂದ್ರರು ಹುಬ್ಬಳ್ಳಿಯ ರಾಷ್ಟ್ರೀಯ ಶಾಲೆಗೆ ಸೇರಿದರು. ಅಲ್ಲಿ ಬಡಗಿತನ ಕಲಿತರು. ಕಾಲಿಗೆ ಉಳಿ ಏಟು ತಗುಲಿ ಶಾಲೆಗೆ ಶರಣು ಹೇಳಿ ಮತ್ತೆ ಶಾಲೆಗೆ ಸೇರಿದ್ದು ಧಾರವಾಡದ ರಾಷ್ಟ್ರೀಯ ಶಾಲೆ. ಅಲ್ಲಿ ಹೊಸಕೆರೆ ಚಿದಂಬರಯ್ಯನವರು ಪಾರಮಾರ್ಥಕ ವಿಷಯ ಬೋಧಿಸಿದರೆ, ಸಹ ಪ್ರಬುದ್ಧೆಯವರು ಬೋಧಿಸುತ್ತಿದ್ದುದು ಸಂಸ್ಕೃತಿ. ಇವರ ಜೊತೆ ಪಾಠ ...
READ MORE