‘ಆ ಸೊಗಸಿನ ಬಂಗಾರದ ದಿನಗಳು’ ಕೃತಿಯು ಎಸ್. ಅನಂತನಾರಾಯಣ ಅವರ ಅನುವಾದಿತ ಕಾದಂಬರಿಯಾಗಿದೆ. ಈ ಕೃತಿಯು ಲಾರಾ ಇಂಗಲ್ಸ್ ವೈಲ್ಡರ್ ಕತೆಗಾರ್ತಿಯ ಜೀವನಗಾಥೆಯನ್ನು ವಿವರಿಸುತ್ತದೆ. 1867ರಲ್ಲಿ ಅಮೆರಿಕಾದ ವಿದ್ಕಾನ್ಸಿನ್ನಿನ ದೊಡ್ಡ ಕಾಡಿನ ಪುಟ್ಟ ಮನೆಯಲ್ಲಿ ಹುಟ್ಟಿದವಳು ಲಾರಾ ಇಂಗಲ್ಸ್ ವೈಲ್ಡರ್. ಚಕಾನ್ಸಾಸ್, ಮಿನ್ನೆಸೋಟ ಮತ್ತು ಡಕೋಟ ಪ್ರದೇಶಗಳಿಗೆ ತನ್ನವರೊಂದಿಗೆ ಮುಚ್ಚಿದ ಬಂಡಿಯಲ್ಲಿ ಪ್ರಯಣ ಮಾಡಿದಳು. ಅಲ್ಮಾಂಜೊ ವೈಲ್ಡರನ್ನು ಭೇಟಿಯಾಗಿ ಮದುವೆಯಾದಳು. ತನ್ನ ಎಳೆತನದ ಕಾಲದ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ಆಕೆ ಒಂಭತ್ತು ಕಾದಂಬರಿಗಳನ್ನು ಬರೆದಿದ್ದಾಳೆ ಎನ್ನುವುದನ್ನು ಈ ಕೃತಿಯು ವಿವರಿಸುತ್ತದೆ. ಕಾಡಿನಲ್ಲಿ ಪುಟ್ಟ ದಿಮ್ಮಿಯ ಮನೆಯೊಂದರಲ್ಲಿ ಇದ್ದುಕೊಂಡು ಸ್ವಯಂ ಪರಿಪೂರ್ಣವಾಗಿದ್ದ ಅವರ ಸಂಸಾರದ ಸರಸ ಸುಂದರ ಚಿತ್ರಣ ಇಲ್ಲಿ ಕಾಣಬಹುದು. ಅಮೆರಿಕದ ಜನರ ಬದುಕಿನ ನೈಜ ಚಿತ್ರಣ ಈ ಕಾದಂಬರಿಗಳಲ್ಲಿ ಮೂಡಿಬಂದಿದೆ. ಗಾರ್ತ್ ವಿಲಿಯಂಸ್ ಈ ಎಲ್ಲ ಕಾದಂಬರಿಗಳಿಗೂ ವಿಶೇಷವಾದ ಚಿತ್ರಗಳನ್ನು ರಚಿಸಿಕೊಟ್ಟಿದ್ದಾರೆ. ಲವಲವಿಕೆಯ ಕಥನಗಾರಿಕೆಯಿಂದ ಮನೆಸೆಳೆಯುವ ಲಾರಾ ಇಂಗಲ್ಸ್ ವೈಲ್ಡರ್ ಳ ಈ ಕಥಾಸರಣಿಯ ಓದು ನಿಜಕ್ಕೂ ಚೇತೋಹಾರಿಯಾದುದು .
©2024 Book Brahma Private Limited.