ಸಲೀಂ ತೆಲುಗು ಭಾಷೆಯ ಸೂಕ್ಷ್ಮ ಸಂವೇದಿ ಲೇಖಕ. ಸಲೀಂ ತೆಲುಗಿನಲ್ಲಿ ಪ್ರಕಟಿಸಿದ ‘ಮೇಧ 017’ಎಂಬ ಮಕ್ಕಳ ಕಾದಂಬರಿಯನ್ನು ಧನಪಾಲ ನಾಗರಾಜಪ್ಪ ಅವರು ಅದೇ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ಬ್ರಹ್ಮ ಮತ್ತು ತಮಸ್ವಿನಿ ದಂಪತಿಗಳಿಗೆ ಸ್ಕರಣೆ ಮತ್ತು ಶೃತಿ ಎನ್ನುವ ಇಬ್ಬರು ಮಕ್ಕಳು, ಅಪ್ಪ ಸದಾ ತನ್ನ ಸಂಶೋಧನೆಯಲ್ಲಿ ಮಗ್ನನಾಗಿದ್ದರೆ ಇವರು ವೀಡಿಯೋ ಗೇಮ್ಸ್, ಕಂಪ್ಯೂಟರ್ ಗೇಮ್ಸ್ಗೆ ದಾಸರಾಗುತ್ತಾರೆ. ಮೊದಮೊದಲು ತಾವು ಆಡುತ್ತಿದ್ದ ಆಟಗಳು ಆಸಕ್ತಿಕರವಾಗಿ ಅನಿಸಿದರೂ ಸಮಯ ಕಳೆದಂತೆ ಆ ಆಟಗಳು ಅವರಿಗೆ ಇಷ್ಟವಾಗುವುದಿಲ್ಲ. ಶೃತಿಯ ಕೋರಿಕೆಯಂತೆ ಬ್ರಹ್ಮ ಅವರಿಗೆ ವರ್ಚುವಲ್ ಗೇಮ್ ತಯಾರಿಸಿಕೊಡುತ್ತಾನೆ. ಅದರಿಂದ ಆ ಮಕ್ಕಳಿಗೆ ತಾವಿರುವ ಕಡೆಯಲ್ಲೇ ಹಿಮ ಪರ್ವತಾರೋಹಣದ ಅನುಭೂತಿ, ಕಾಡಿನಲ್ಲಿ ಬೇಟೆಯಾಡುವ ಅನುಭೂತಿ ಆಗುತ್ತದೆ.
ಸ್ವಲ್ಪ ಸಮಯದ ನಂತರ ಆ ಮಕ್ಕಳಿಗೆ ವರ್ಚುವಲ್ ಗೇಮ್ ಕೂಡ ಬೇಸರ ಅನಿಸಿದಾಗ ಬ್ರಹ್ಮ ಆರ್ಜೀ (ರಿಯಲ್ ಗೇಮ್) ಅನ್ನು ತಯಾರಿಸಿ ಕೊಡುತ್ತಾನೆ. ರಿಯಲ್ ಗೇಮ್ಸ್ ಆಡುವಾಗ ಆಗುವ ಸಣ್ಣ ಆಚಾತುರದಿಂದ ಆರ್ಜೀ ಕಂಪ್ಯೂಟರ್ನಲ್ಲಿ ಎಂತಹ ಬದಲಾವಣೆಗಳಾದವು? ಅದರಿಂದ ಸ್ಮರಣೆ ಮತ್ತು ಶೃತಿಯೊಂದಿಗೆ ಅವರ ಇಡೀ ಕುಟುಂಬ ಏನೆಲ್ಲಾ ಸಂಕಷ್ಟಕ್ಕೆ ಸಿಲುಕಿತು? ಕೊನೆಗೆ ಅದರಿಂದ ಅವರು ಹೇಗೆ ಪಾರಾದರು ಎಂಬ ಕಥಾ ಹಂದರವನ್ನುಳ್ಳ ಕಾದಂಬರಿ “ಮೇಧ-೦೧೭”.
©2024 Book Brahma Private Limited.