About the Author

ಧನಪಾಲ ನಾಗರಾಜಪ್ಪನವರು ಅನುವಾದಕರಾಗಿ ಚಿರಪರಿಚಿತರು. ನಾಗರಾಜಪ್ಪ ಹಾಗೂ ರಾಮಚಂದ್ರಮ್ಮ ದಂಪತಿಯ ಮಗನಾಗಿ 20-06-1987 ರಂದು ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿ. ಜನಿಸಿದರು. ಭಾರತೀಯ ವಾಯು ಸೈನ್ಯದಲ್ಲಿ PBOR ಶ್ರೇಣಿಯಲ್ಲಿ ಕಳೆದ 15 ವರ್ಷಗಳಿಂದ ಏರ್ ಮೆನ್ ಆಗಿ ವೈದ್ಯಕೀಯ ಸಹಾಯಕನ ವೃತ್ತಿ. ಕಳೆದ 15 ವರ್ಷಗಳಿಂದ ಸಾಹಿತ್ಯಿಕ ಕೃಷಿಯಲ್ಲಿ ನಿರತನಾಗಿದ್ದು ಸ್ವ ರಚನೆ, ಸಂಪಾದನೆ, ಪ್ರಕಾಶನ ಮತ್ತು ಅನುವಾದದ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ.

ನಿವೇದನೆ (ಕವನ ಸಂಕಲನ), ಮಿತ್ರವಾಣಿ (ಪ್ರಧಾನ ಸಂಪಾದಕತ್ವದ ಕವನ ಸಂಕಲನ), ಕಾಡುವ ಕಥೆಗಳು (ಅನುವಾದಿತ ಕಥಾ ಸಂಕಲನ, ತೆಲುಗು ಮೂಲ : ಸಲೀಂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು), ತಣ್ಣೀರ ಬಟ್ಟೆಯ ಬಿಸಿ (ಅನುವಾದಿತ ಕಥಾ ಸಂಕಲನ,‌ ತೆಲುಗು ಮೂಲ : ಆಯ್ದ ಲೇಖಕರ ಸಣ್ಣ ಕಥೆಗಳು), ಜೀವನ್ಮೃತರು (ಅನುವಾದಿತ ಕಾದಂಬರಿ, ತೆಲುಗು ಮೂಲ : ಸಲೀಂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು), ಮೇಧ-೦೧೭ (ಅನುವಾದಿತ ಮಕ್ಕಳ ಕಾದಂಬರಿ, ತೆಲುಗು ಮೂಲ : ಸಲೀಂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು), ಅಪರಾಜಿತ (ಅನುವಾದಿತ ಮಕ್ಕಳ ಕಾದಂಬರಿ, ತೆಲುಗು ಮೂಲ : ಸಲೀಂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು),  ಊರಪ್ಪ-ಊರಮ್ಮ (ಜೀವನ ಕಥನ),  ಕಾಡುವ ಕಥೆಗಳು-೨ (ಅನುವಾದಿತ ಕಥಾ ಸಂಕಲನ, ತೆಲುಗು ಮೂಲ : ಸಲೀಂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು), ಗುಹೆಯಲ್ಲಿ ಒಂದು ದಿನ (ಅನುವಾದಿತ ಮಕ್ಕಳ ಸಚಿತ್ರ ಕತೆ ಪುಸ್ತಕ, ತೆಲುಗು ಮೂಲ : ಸಲೀಂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು), ಅಮ್ಮು ಮತ್ತು ಗುಬ್ಬಚ್ಚಿಗಳು (ಅನುವಾದಿತ ಮಕ್ಕಳ ಸಚಿತ್ರ ಕತೆ ಪುಸ್ತಕ, ಆಂಗ್ಲ ಮೂಲ : ವಿನೀತಾ. ಆರ್), ಬದರ್ (ಅನುವಾದಿತ ಅಬಾಬಿಗಳ ಸಂಕಲನ, ತೆಲುಗು ಮೂಲ : ಷೇಕ್ ಕರೀಮುಲ್ಲಾ), ಫಾತಿಮಾ ಮತ್ತು ತನ್ವಿ (ಅನುವಾದಿತ ಮಕ್ಕಳ ಸಚಿತ್ರ ಕತೆ‌ ಪುಸ್ತಕ, ತೆಲುಗು ಮೂಲ : ಶಾಖಮೂರಿ ಶ್ರೀನಿವಾಸ್) , ತೆಲುಗು ಮೂಲ : ಸಲೀಂ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು) ಕೃತಿಯ ಕನ್ನಡ ಅನುವಾದಿತ ಮಕ್ಕಳ ಕಾದಂಬರಿ ಆಪರೇಷನ್ ಕೈಟಿನ್ ..

ಧನಪಾಲ ನಾಗರಾಜಪ್ಪ

(20 Jun 1987)

Awards