‘ಕಳ್ಳಿಗಾಡಿನ ಇತಿಹಾಸ’ ತಮಿಳು ಲೇಖಕ ವೈರಮುತ್ತು ಅವರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ತಮಿಳು ಕಾದಂಬರಿಯ ಕನ್ನಡಾನುವಾದ. ಈ ಕೃತಿಯನ್ನು ಮಲರ್ ವಿಳಿ. ಕೆ ಅವರು ಕನ್ನಡೀಕರಿಸಿದ್ದಾರೆ. ಪ್ರಸ್ತುತ ಕಾದಂಬರಿ ಕಳ್ಳಿಪ್ಪಟ್ಟ ಎಂಬ ಹಳ್ಳಿಯಲ್ಲಿನ ಬಡ ಹಾಗೂ ಶೋಷಿತ ಜನರ ಬದುಕಿನ ಬವಣೆಯನ್ನು ಯಥಾವತ್ತಾಗಿ ಚಿತ್ರಿಸುವ ಪಾಮರರ ಕಥಾನಕ. ಇಲ್ಲಿಯ ನಾಯಕ ಪೇಯತ್ತೇವರ್ ಬರಡು ನೆಲದಲ್ಲಿ, ಬವಣೆಯ ಬದುಕಿನಲ್ಲಿ ನಿರಂತರ ಛಲದಿಂದ ಹೋರಾಡುತ್ತಾ ಪ್ರಾಮಾಣಿಕತೆ, ಆತ್ಮಸ್ಥೆರ್ಯ, ಭರವಸೆ, ನಂಬಿಕೆಯ ತಳಹದಿಯ ಮೇಲೆ ಗಟ್ಟಿಯಾಗಿ ನಿಂತ ಹಿರಿಯ ಜೀವ. 1958ರಲ್ಲಿ ವೈಗೈ ನದಿಗೆ ಅಣೆಕಟ್ಟು ಕಟ್ಟಿ ಸುಮಾರು 12ರಿಂದ 14 ಗ್ರಾಮಗಳು ಮುಳುಗಡೆಯಾಗುವ ಸಂದರ್ಭವೇ ಇಲ್ಲಿನ ವಸ್ತು. ತಾವು ಹುಟ್ಟಿ ಬೆಳೆದ ಮಣ್ಣಿನ ಬಗ್ಗೆ ಅವಿನಾಭಾವ ಸಂಬಂಧವನ್ನು ಅನಿವಾರ್ಯವಾಗಿ ಕಳಚಿಕೊಂಡು ಗೊತ್ತುಗುರಿಯಿಲ್ಲದೆ ಹೊರಟ ಜನರ ದಾರುಣ ಪರಿಸ್ಥಿತಿ ಮನಕಲಕುತ್ತದೆ. ಕಳಪಟ್ಟ ಮುಳುಗಡೆಯಾಗುತ್ತಿದ್ದಾಗ ತನ್ನ ಮನೆಯ ಗೋಡೆಯ ಮಣ್ಣನ್ನು ಒಂದು ಹಿಡಿ ಬಾಗಿ ತೆಗೆದುಕೊಳ್ಳುತ್ತಿದ್ದಂತೆಯೇ ಗೋಡೆ ಕುಸಿದು ಮರಣವನ್ನಪ್ಪುವ ದೃಶ್ಯ ಹೃದಯ ವಿದ್ರಾವಕವಾದುದು.
‘ಕಳ್ಳಿಗಾಡಿನ ಇತಿಹಾಸ’ ಕೃತಿಯ ವಿಮರ್ಶೆ
ಕಾದಂಬರಿ ಕಳ್ಳಿಪಟ್ಟಿ ಎಂಬ ಹಳ್ಳಿಯಲ್ಲಿನ ಬಡ ಹಾಗೂ ಶೋಷಿತ ಜನರ ಬದುಕಿನ ಬವಣೆಯನ್ನು ಯಥಾವತ್ತಾಗಿ ಚಿತ್ರಿಸುವ ಪಾಮರರ ಕಥಾನಕ, 1958ರಲ್ಲಿ ವೈಗೈ ನದಿಗೆ ಅಣೆಕಟ್ಟು ಕಟ್ಟಿ ಸುಮಾರು 12 ರಿಂದ 14 ಗ್ರಾಮಗಳು ಮುಳುಗಡೆಯಾಗುವ ಸಂದರ್ಭವೇ ಈ ಇಲ್ಲಿನ ಕಥಾವಸ್ತು. ತಾವು ಹುಟ್ಟಿ ಬೆಳೆದ ಊರನ್ನು ತೊರೆದು, ಗೊತ್ತು ಗುರಿ ಇಲ್ಲದೆ ಹೊರಡುವ ಜನರ ದಾರುಣ ಸ್ಥಿತಿಯನ್ನು ಈ ಕಾದಂಬರಿ ಚಿತ್ರಿಸುತ್ತದೆ. ಕಳ್ಳಿಪಟ್ಟಿ ಮುಳುಗಡೆಯಾಗುವ ಹೊತ್ತಿನಲ್ಲಿ ತನ್ನ ಮನೆಯ ಗೋಡೆಯ ಮಣ್ಣನ್ನು ಒಂದು ಹಿಡಿ ಬಾಗಿ ತೆಗೆದುಕೊಳ್ಳುತ್ತಿದ್ದಂತೆಯೇ ಗೋಡೆ ಕುಸಿದು ಮರಣವನ್ನಪ್ಪುವ ದೃಶ್ಯ ಓದುಗರ ಹೃದಯವನ್ನು ಹಿಂಡುತ್ತದೆ. ಈ ಕಾದಂಬರಿ ವ್ಯವಸ್ಥೆಯ ಅಮಾನುಷ ಕೌರ್ಯವನ್ನು ತಣ್ಣಗೆ ದಾಟಿಸುತ್ತದೆ.
(ಕೃಪೆ ; ಹೊಸಪುಸ್ತಕ, ಸಮಾಜಮುಖಿ)
©2024 Book Brahma Private Limited.