‘ಗಡಿಪಾರು’ ಕಾದಂಬರಿಯ ಮೂಲ ಮರಾಠಿ ಹೆಸರು ’ರಿಬೋಟ’. ‘Rebound’ ಎಂಬುದಕ್ಕೆ ಮುಂಬೈನ ’ಚಾಳ ಸಂಸ್ಕೃತಿ’ಯು ನೀಡಿದ ಆಡು ಮಾತಿನ ರೂಪ. ಲೇಖಕರಾದ ಜಿ. ಕೆ. ಐನಾಪುರೆಯವರು ಸಂಕಟ, ದುಃಖದಾಯಕ ಎಂಬ ಉದ್ದೇಶದಿಂದಲೇ ಬಳಸಿದ್ದಾರೆ. ಇದನ್ನು ಕನ್ನಡಕ್ಕೆ ತಂದವರು ಚಂದ್ರಕಾಂತ ಪೋಕಳೆ.
’ಜವಳಿ ಗಿರಣಿಯ ಸಂಪಿನಿಂದಾಗಿ ಗಿರಣಗಾಂವಿನ, ವಿಶೇಷವಾಗಿ ಬಿ.ಡಿ.ಡಿ ಚಾಳಿನ ಸಂಸ್ಕೃತಿಯ ವಿನಾಶ’ ವನ್ನು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ. ಗಿರಣಿ ಕಾರ್ಮಿಕರ ಬದುಕಿನ ಚಿತ್ರಗಳನ್ನು , ಮಾನವೀಯ ಸಂಬಂಧಗಳ ಕಥೆಯನ್ನೂ ಬಿತ್ತಲಾಗಿದೆ.
ಹಸಿವು ಮತ್ತು ಕಾಮದ ನಿಗೂಢ ಸಂಬಂಧಗಳ ಸೂಕ್ಷ್ಮ ಹುಡುಕಾಟದ ಪ್ರಯತ್ನವನ್ನೂ ಇಲ್ಲಿ ಕಾಣಬಹುದು. ಈ ಕಾದಂಬರಿಯಲ್ಲಿ ಬರುವ ಸ್ತ್ರೀ ಪಾತ್ರಗಳು ಬದುಕನ್ನು ಎದುರಿಸುವ ರೀತಿ ವಿಭಿನ್ನವಾದುದು.
©2024 Book Brahma Private Limited.